February 2, 2026

ನವೀನ್ ಮೃತದೇಹವನ್ನು ತರುವ ಬದಲು 10 ಮಂದಿಯನ್ನು ಕರೆದುಕೊಂಡು ಬರಬಹುದು: ಶಾಸಕ ಅರವಿಂದ್ ಬೆಲ್ಲದ್

0
Screenshot_2022-03-04-10-58-07-57_40deb401b9ffe8e1df2f1cc5ba480b12.jpg

ಧಾರವಾಡ: ಇತ್ತೀಚೆಗಷ್ಟೇ ಉಕ್ರೇನ್‌ನಲ್ಲಿ ಪ್ರಾಣ ಕಳೆದುಕೊಂಡ ಹಾವೇರಿ ಯುವಕನ ಕುರಿತು ಶಾಸಕ ಅರವಿಂದ್ ಬೆಲ್ಲದ್ ಅವರು ಬೇಜವಾಬ್ದಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ.

ಖಾರ್ಕಿವ್‌ನಲ್ಲಿ ರಷ್ಯಾದ ಪಡೆಗಳ ಶೆಲ್ ದಾಳಿಯಲ್ಲಿ ಹತರಾದ ನವೀನ್ ಜ್ಞಾನ ಗೌಡರ್ ಅವರ ದೇಹವನ್ನು ಮರಳಿ ತರುವ ಬದಲು 10 ಜನರನ್ನು ವಿಮಾನದಲ್ಲಿ ಸ್ಥಳಾಂತರಿಸಬಹುದು ಎಂದು ಬೆಲ್ಲದ್ ಅವರು ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾರತ ಸರ್ಕಾರದ ವಿದೇಶಾಂಗ ಇಲಾಖೆ ಹಾವೇರಿಯ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಶವ ತರಲು ಪ್ರಯತ್ನ ಮಾಡುತಿದ್ದಾರೆ. ಸ್ವತಃ ಪ್ರಧಾನಿ ಮೋದಿ ಅವರೇ ಮುತುವರ್ಜಿ ವಹಿಸಿದ್ದಾರೆ.

ಭಾರತೀಯ ವಿದ್ಯಾರ್ಥಿಗಳನ್ನು ತರುವ ಪ್ರಯತ್ನ ನಡೆದಿದೆ. ಅಲ್ಲಿ ಯುದ್ದ ನಡೆಯುತ್ತಿದೆ, ಈ ಬಗ್ಗೆ ಮಾದ್ಯಮದವರೇ ಅದನ್ನ ತೊರಿಸುತಿದ್ದಾರೆ. ಜೀವಂತ ಇದ್ದವರನ್ನೇ ತರುವದು ಕಷ್ಟ ಆಗಿದೆ, ಶವ‌ ತರೋದು ಇನ್ನೂ ಕಷ್ಟ ಇದೆ. ವಿಮಾನದಲ್ಲಿ ಶವ ತರಲು ಹೆಚ್ಚು ಜಾಗ‌ಬೇಕು. ಶವ‌ ಇರುವ ಜಾಗದಲ್ಲೇ 10 ಜನರನ್ನ ಕರೆದುಕೊಂಡು ಬರಬಹುದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!