February 2, 2026

ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಬೇಡಿಕೆ ಮೇರೆಗೆ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಪುತ್ತೂರು ವತಿಯಿಂದ ‘ತುರ್ತು ಸಾರ್ವಜನಿಕ ರಕ್ತದಾನ ಶಿಬಿರ’

0
IMG_20220303_125426.jpg

ಪುತ್ತೂರು: ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರಿನಲ್ಲಿ ರಕ್ತದ ಸ್ಟಾಕ್ ಕಡಿಮೆಯಾಗಿದ್ದು, ರಕ್ತದ ಬೇಡಿಕೆ ಇರುವುದರಿಂದ ರಕ್ತ ಪೂರೈಕೆ ಮಾಡಲು ಅಸಾಧ್ಯವಾಗುತ್ತಿತ್ತು. ಇದರ ಬಗ್ಗೆ ಮಾಹಿತಿ ಪಡೆದ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಕಾರ್ಯನಿರ್ವಾಹಕರು ರೋಟರಿ ಬ್ಲಡ್ ಬ್ಯಾಂಕಿನಲ್ಲಿ ‘ತುರ್ತು ಸಾರ್ವಜನಿಕ ರಕ್ತದಾನ ಶಿಬಿರ’ ನಡೆಸಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿ ಅಧ್ಯಕ್ಷರಾದ ಜಾಬಿರ್ ಅರಿಯಡ್ಕ ಅವರು, ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಕರ್ನಾಟಕ ರಾಜ್ಯಾದ್ಯಂತ ಕಾರ್ಯನಿರ್ವಸುತ್ತಿದ್ದು, ತುರ್ತು ಸೇವೆಗಳಿಗೆ ಸ್ಪಂದಿಸುತ್ತಾ ಬರುತ್ತಾ ಇದೆ, ಯುವಕರನ್ನು ಸಮಾಜಮುಖಿ ಕೆಲಸಗಳಿಗಾಗಿ ಪಾಪ್ಯುಲರ್ ಫ್ರಂಟ್ ಸಜ್ಜುಗೊಳಿಸುತ್ತಾ ಇದೆ, ಸಾರ್ವಜನಿಕರ ಸೇವೆಗೆ ಸದಾ ಸಿದ್ಧ ಇರುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ರಕ್ತದಾನದ ಮಹತ್ವದ ಕುರಿತು ವಿವರಿಸಿದ ರೋಟರಿ ಬ್ಲಡ್ ಬ್ಯಾಂಕಿನ ವೈದ್ಯಾಧಿಕಾರಿ ಡಾ| ರಾಮಚಂದ್ರ ಭಟ್ ಅವರು ಪಿಎಫ್ಐ ಸಂಘಟನೆ ನಮ್ಮ ಬ್ಲಡ್ ಬ್ಯಾಂಕಿನ ಎಲ್ಲ ಅವಶ್ಯಕತೆಗಳಿಗೆ ಉತ್ತಮ ಸ್ಪಂದನೆ ನೀಡುತ್ತಾ ಬಂದಿದ್ದಾರೆ, ಯಾವುದೇ ಸಂದರ್ಭದಲ್ಲೂ ಕೂಡ ರಕ್ತದ ಅವಶ್ಯಕತೆ ಬಂದಾಗ ರಕ್ತದಾನ ಮಾಡಿ ನೆರವಾಗುತ್ತಾರೆ. ತುರ್ತು ಸಂದರ್ಭಗಳಲ್ಲಿ ಅವರ ಸೇವೆ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಪುತ್ತೂರು ಜಿಲ್ಲಾ ಸಂಚಾಲಕರಾದ ಎಂ.ಎ ರಫೀಕ್, ಪಿಎಫ್ಐ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಕೆಮ್ಮಾಯಿ, ಇಫಾಝ್ ಬನ್ನೂರು, ಸಾಬಿತ್ ಕುಂಬ್ರ, ಸಮೀರ್ ಡಿ.ಕೆ ಉಪಸ್ಥಿತರಿದ್ದರು. ಶಾಕಿರ್ ಕ್ಯಾಂಪಸ್ ಸ್ವಾಗತಿಸಿ, ರಫೀಕ್ ಎಂ.ಎಸ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!