February 2, 2026

ಬಜರಂಗ ದಳದ ಮುಖಂಡನಿಂದ ದಲಿತ ಯುವಕನ ಕೊಲೆಗೆ ಸರ್ಕಾರದ ಮೌನಕ್ಕೆ ವೆಲ್ಫೇರ್ ಪಕ್ಷದ ಜಿಲ್ಲಾ ಸಮಿತಿಯ ವತಿಯಿಂದ ಖಂಡನೆ

0
IMG-20220303-WA0000.jpg

ಮಂಗಳೂರು: ರಾಜ್ಯದಲ್ಲಿ ಇಂದು ರಾಜಕೀಯ ಲಾಭಗಳ ಲೆಕ್ಕಾಚಾರದಲ್ಲಿ ಆಡಳಿತ ವರ್ಗದ ರಾಜಕಾರಣಿಗಳಿಂದಲೇ, ಸಮಾಜದ ಸಾಮರಸ್ಯ ಕದಡುವ ಪ್ರಯತ್ನ ಎಗ್ಗಿಲ್ಲದೆ ಸಾಗಿದೆ ಇದು ನಿಜಕ್ಕೂ ವಿಷಾದನೀಯ ವಿಪರ್ಯಾಸಕರ ಮಾತ್ರವಲ್ಲದೆ, ಶಾಂತಿ,ಸೌಹಾರ್ದತೆಯನ್ನು ಬಯಸುವ ನಾಗರಿಕರೆಲ್ಲರಿಗೂ ತುಂಬಾ ನೋವಿನ ಸಂಗತಿಯಾಗಿ ಪರಿಣಮಿಸಿದೆ.

ಯಾಕೆಂದರೆ, ಇಂದು ಮತೀಯವಾದಿಗಳ ಇಷ್ಟೊಂದು ರೀತಿಯ ಬೆಳವಣಿಗೆಯಲ್ಲಿನ, ಇದರ ವ್ಯಾಪ್ತಿ ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ, ಇತ್ಯಾದಿ ಯಾವುದೇ ಕೊಲೆಗಳು ಪರಸ್ಪರ ವಿಭಿನ್ನ ಮತಗಳ ಜನರಿಂದ ಹತ್ಯೆಯಾದರೆ ಮಾತ್ರ ಅದು ಮಾಧ್ಯಮಗಳಿಂದ ಸುದ್ದಿಯಾಗುವುದು ಮತ್ತು ಹತ್ಯೆಯಾದವನ ಕುಟುಂಬಕ್ಕೆ ಸರಕಾರದ ವತಿಯಿಂದ ಮತ್ತು ಅಷ್ಟೊಂದು ಸ್ವಾರ್ಥ ಹಿತಾಸಕ್ತಿಯ ರಾಜಕಾರಣಿಗಳು ಹಾಗೂ ಇತರ ಜನಗಳ ಕಡೆಯಿಂದ ಏನಾದರೂ ಪರಿಹಾರ ಧನ ದೊರಕುವುದು ಎಂಬಷ್ಟರ ಮಟ್ಟಿಗೆ ವಸ್ತುಸ್ಥಿತಿ ತಲುಪಿದೆ.

ಉಳಿದಂತೆ (ಇವರ, ರಾಜಕೀಯ ಲಾಭಗಳ ವ್ಯಾಪ್ತಿಯಲ್ಲಿರದ) ಯಾವ ಬಡಪಾಯಿಯ ಕೊಲೆ ನಡೆದರೂ ಅದನ್ನು ಕೇಳುವವರೇ ಇಲ್ಲ ಎಂಬಂತಹ ಬಹಳ ದುರದೃಷ್ಟಕರ ಸನ್ನಿವೇಶ ಇಂದು ಸಮಾಜದಲ್ಲಿ ಸಂಜಾತವಾಗಿದೆ ಈ ನಿಟ್ಟಿನಲ್ಲಿ ನಾವು ನೋಡುವುದಾದರೆ, ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಎಂಬಲ್ಲಿ ಬಜರಂಗ ದಳದ ಮುಖಂಡನಿಂದ ಹತ್ಯೆಯಾದ ದಿನೇಶ್ ಕನ್ಯಾಡಿ ಎಂಬ ದಲಿತ ಯುವಕನ ಸಾವು ಮಾಧ್ಯಮದಲ್ಲಿಯೂ ಹೆಚ್ಚು ಸುದ್ದಿಯಾಗದೆ, ಸರಕಾರವು ಕೂಡಾ ಈ ಬಗ್ಗೆ ಮೌನಕ್ಕೆ ಶರಣಾಗಿರುವುದು ಅಕ್ಷಮ್ಯವಾಗಿದ್ದು ಇದನ್ನು ವೆಲ್ಫೇರ್ ಪಾರ್ಟಿ ಅಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಖಂಡಿಸುವುದು ಮಾತ್ರವಲ್ಲದೆ, ಸರಕಾರವು ಕೊಲೆ ರಾಜಕೀಯ ಮಾಡುವುದನ್ನು ಬಿಟ್ಟು, ಹತ್ಯೆಯಾದ ದಿನೇಶ್ ಕನ್ಯಾಡಿಯವರ ಕುಟುಂಬಕ್ಕೆ ಸೂಕ್ತ ಪರಿಹಾರ ಧನವನ್ನು ಒದಗಿಸಿ ಕೊಡುವ ಜತೆಯಲ್ಲಿ ಅಪರಾಧಿಗೆ ತಮ್ಮವನು ಎಂಬ ನೆಲೆಯಲ್ಲಿ ಯಾವುದೇ ಮೃಧು ಧೋರಣೆ ಅನುಸರಿಸದೆ ಉಗ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಮೂಲಕ ಸರಕಾರದ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ,ಸಮರ್ಥವಾಗಿ ನಿರ್ವಹಿಸಲು ರಾಜ್ಯ ಸರ್ಕಾರದೊಂದಿಗೆ ಆಗ್ರಹಿಸುತ್ತದೆ ಎಂಬುವುದಾಗಿ ವೆಲ್ಫೇರ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ವಕ್ತಾರರಾಗಿರುವ, ಎಸ್. ಎಮ್. ಮುತ್ತಲಿಬ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.

Leave a Reply

Your email address will not be published. Required fields are marked *

error: Content is protected !!