February 2, 2026

ಬಸ್ ಸ್ಟಾಂಡ್ ಶೌಚಾಲಯದ ಒಳಗಡೆ ಮಲಗಿದ ಮಂಗಳೂರಿನ ಯುವಕ

0
image_editor_output_image673350299-1646285848913.jpg

ಅಂಕೋಲಾ: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ತಾಲೂಕಿನ ಸಾರಿಗೆ ಸಂಸ್ಥೆಯ ಕೇಂದ್ರ ಬಸ್ ಸ್ಟಾಂಡ್ ಹಿಂಬದಿಯಲ್ಲಿರುವ ಶೌಚಾಲಯದ ಒಳಗಡೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿದ್ದ ಘಟನೆ ಅಂಕೋಲಾ ಬಸ್ ನಿಲ್ದಣದಲ್ಲಿ‌ ನಡೆದಿದೆ.

ನೂತನವಾಗಿ ನಿರ್ಮಾಣವಾಗಿರುವ ಅಂಕೋಲಾ ಬಸ್ ನಿಲ್ದಾಣದ ಹಿಂಬದಿಯಲ್ಲಿ ಇರುವ ಶೌಚಾಲಯದ ಕೋಣೆಯೊಂದಕ್ಕೆ ಪ್ರವೇಶಿಸಿದ ವ್ಯಕ್ತಿ ಒಳಡೆಯಿಂದ ಚಿಲಕ ಹಾಕಿಕೊಂಡಿದ್ದ.

ಒಳಗೆ ಹೋದ ವ್ಯಕ್ತಿ ಸುಮಾರು ಒಂದು ಗಂಟೆಗೂ ಹೆಚ್ಚಿನ ಕಾಲ ಹೊರಗಡೆ ಬರದೇ ಇದ್ದರಿಂದ ಶೌಚಾಲಯದ ನಿರ್ವಹಣಾ ಸಿಬ್ಬಂದಿ ಕದ ತಟ್ಟಿದರೂ ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಹಿಂಬದಿಯಲ್ಲಿ ಇರುವ ಸಣ್ಣ ಕಿಂಡಿಯಲ್ಲಿ ಮೊಬೈಲ್ ತೂರಿಸಿ ವಿಡಿಯೋ ಚಿತ್ರೀಕರಣ ಮಾಡಿದಾಗ ಒಳಗಡೆ ಆ ವ್ಯಕ್ತಿ ಸತ್ತು ಬಿದ್ದ ರೀತಿಯಲ್ಲಿ ಬಿದ್ದುಕೊಂಡಿರುವುದು ಕಂಡು ಬಂದಿದೆ.

ವ್ಯಕ್ತಿಯ ಕುರಿತು ವಿಚಾರಣೆ ನಡೆಸಿದಾಗ ಆತ ಮಂಗಳೂರಿನ ಕಾಪು ಮೂಲದವನಾಗಿದ್ದು ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ರಸ್ತೆಯಲ್ಲಿ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈತನ ಕುಡಿತದ ಚಟದಿಂದ ಬೇಸತ್ತು ಹೊಟೇಲ್ ಮಾಲಿಕರು ಕೆಲಸದಿಂದ ತೆಗೆದು ಹಾಕಿದ್ದರು ಎನ್ನುವ ಮಾಹಿತಿ ದೊರಕಿದ್ದು ಬೆಳಿಗ್ಗೆ ಕುಡಿದ ಮತ್ತಿನಲ್ಲಿ ಮತ್ತು ನಿದ್ರೆಯ ಮಂಪರಿನಲ್ಲಿದ್ದ ಕಾರಣ ಶೌಚಾಲಯದಲ್ಲಿ ಮಲಗಿರುವದಾಗಿ ತಿಳಿದು ಬಂದಿದ್ದು, ನಂತರ ಬಸ್ ಮೂಲಕ ಊರಿಗೆ ತೆರಳಿದ್ದಾನೆ.

Leave a Reply

Your email address will not be published. Required fields are marked *

error: Content is protected !!