March 22, 2026

ಸುಳ್ಯ: ಜೀವವನ್ನೇ ತೆಗೆದ ಜೀವನ ಆಧಾರಕ್ಕಾಗಿ ಬಳಸುತ್ತಿದ್ದ ಕಟ್ಟಿಂಗ್ ಮೆಷಿನ್

0
IMG-20220302-WA0044.jpg

ಸುಳ್ಯ: ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ನಾಟಿಕ್ಕೇರಿ ನಿವಾಸಿ ದಯಾನಂದ (36 ವರ್ಷ) ಕಾರ್ಮಿಕ ವೃತ್ತಿ ಮಾಡಿ ಸಣ್ಣಪುಟ್ಟ ಕಾಡು ಕಡಿಯುವ ಕೆಲಸವನ್ನು ಕಟಿಂಗ್ ಮಿಷಿನ್ ಮೂಲಕಮಾಡಿ ಜೀವನ ನಡೆಸುತ್ತಿದ್ದರು.
ಅದೇ ಕಟ್ಟಿಂಗ್ ಮಷಿನ್ ಇಂದು ಅವರ ಜೀವವನ್ನೇ ತೆಗೆದ ಘಟನೆ ವರದಿಯಾಗಿದೆ.

ಇಂದು ಅವರು ಕೆಲಸ ಮಾಡುತ್ತಿದ್ದ ಸಂದರ್ಭ ಕಟ್ಟಿಂಗ್ ಮೆಷಿನ್ ತೊಡೆಯ ಭಾಗಕ್ಕೆ ತಾಗಿ ಗಂಭೀರ ಗಾಯಗೊಂಡಿದ್ದರು ಎನ್ನಲಾಗಿದೆ ಕೂಡಲೇ ಸ್ಥಳೀಯರು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಹೆಚ್ಚಿನ ರಕ್ತಸ್ರಾವದಿಂದ ಮೃತಪಟ್ಟರೆಂದು ತಿಳಿದುಬಂದಿದೆ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!