February 2, 2026

ಬ್ರೆಂಟ್ ಕಚ್ಚಾ ತೈಲ: ಬ್ಯಾರೆಲ್‌ಗೆ 110 ಡಾಲರ್‌ಗೆ ಏರಿಕೆ

0
Screenshot_2022-03-02-14-19-07-20_ae93b0d4e668ae3b9e42de29105ee7f0.jpg

ನವದೆಹಲಿ: ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಆರಂಭವಾದ ಬಳಿಕ ಏರುಮುಖವಾಗಿ ಸಾಗಿದ್ದ ಬ್ರೆಂಟ್ ಕಚ್ಚಾ ತೈಲ ಬೆಲೆ ಬುಧವಾರ ಬ್ಯಾರೆಲ್‌ಗೆ 110 ಡಾಲರ್‌ಗೆ ಏರಿಕೆಯಾಗಿದೆ. 2014ರ ಬಳಿಕ ಇದೇ ಮೊದಲ ಬಾರಿ ಬ್ರೆಂಟ್ ಕಚ್ಚಾ ತೈಲ ಈ ಮಟ್ಟಕ್ಕೆ ಏರಿಕೆಯಾಗಿದೆ.

ರಷ್ಯಾ ಮೇಲೆ ಜಾಗತಿಕ ಮಟ್ಟದಲ್ಲಿ ಹೇರಲಾಗಿರುವ ಆರ್ಥಿಕ ನಿರ್ಬಂಧಗಳು, ಯುದ್ಧದಿಂದಾಗಿ ವಿಶ್ವಮಟ್ಟದಲ್ಲಿ ಇಂಧನ ಪೂರೈಕೆ ಮೇಲೆ ಆಗಿರುವ ಪರಿಣಾಮಗಳು ದರ ಏರಿಕೆಗೆ ಕಾರಣ ಎನ್ನಲಾಗಿದೆ.

ಅಮೆರಿಕ ಸೇರಿದಂತೆ ಅನೇಕ ದೇಶಗಳು ರಷ್ಯಾ ಮೇಲೆ ಸರಣಿ ನಿರ್ಬಂಧಗಳನ್ನು ಹೇರಿದ್ದು, ಆ ದೇಶದ ಆರ್ಥಿಕತೆ ಕುಸಿಯುವಂತೆ ಮಾಡುವುದಾಗಿ ಹೇಳಿವೆ. ಈ ಕ್ರಮಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಸೃಷ್ಟಿಸಿವೆ.

ರಷ್ಯಾವು ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕ ದೇಶವಾಗಿದೆ. ರಷ್ಯಾ ಮೇಲೆ ಹೇರಲಾಗಿರುವ ರಫ್ತು ನಿರ್ಬಂಧಗಳು ಆ ದೇಶದಿಂದ ತೈಲ ಪೂರೈಕೆಗೆ ಅಡಚಣೆ ಉಂಟುಮಾಡಿದೆ.

Leave a Reply

Your email address will not be published. Required fields are marked *

error: Content is protected !!