February 1, 2026

ಟಿ 20 ವಿಶ್ವಕಪ್ “ಪಾಕಿಸ್ತಾನದ ಜಯ ಸಂಭ್ರಮಿಸಿದರೆ ದೇಶದ್ರೋಹ ಪ್ರಕರಣ ದಾಖಲು: ಯೋಗಿ ಆದಿತ್ಯನಾಥ್

0
Screenshot_2021-10-28-10-40-21-35_680d03679600f7af0b4c700c6b270fe7.jpg

ಲಕ್ನೋ: ಟಿ20 ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ದ ಭಾರತ ಸೋತ ಬಳಿಕ ಪಾಕ್‌ ಜಯದ ಸಂಭ್ರಮಾಚರಣೆ ನಡೆಸುವ ಕುರಿತು ವರದಿಯಾಗುತ್ತಿದ್ದು, ಈ ರೀತಿಯ ವರ್ತನೆಗಳ ವಿರುದ್ದ ದೇಶದ್ರೋಹ ಕಾನೂನು ಪ್ರಯೋಗಿಸುವ ಎಚ್ಚರಿಕೆಯನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌‌ ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, “ಪಾಕಿಸ್ತಾನದ ಜಯ ಸಂಭ್ರಮಿಸಿದರೆ ದೇಶದ್ರೋಹ ಪ್ರಕರಣ ದಾಖಲಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.

“ಅ.24ರ ಪಂದ್ಯದ ಬಳಿಕ ಭಾರತದ ವಿರುದ್ದ ಟೀಕೆ ಮಾಡಿದ್ದಕ್ಕಾಗಿ ಬದೌನ್‌ ಸೇರಿದಂತೆ ಆಗ್ರಾ, ಬರೇಲಿ ಹಾಗೂ ಸೀತಾಪುರ ಜಿಲ್ಲೆಗಳಲ್ಲಿ ಐದು ಪ್ರಕರಣಗಳಲ್ಲಿ 7 ಮಂದಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ” ಎಂದು ಉತ್ತರಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!