March 22, 2026

ಚರ್ಚ್ ಗೆ ನುಗ್ಗಿ ಗುಂಡಿನ ದಾಳಿ: ಮೂವರು ಮಕ್ಕಳು ಸೇರಿ ಐವರು ಮೃತ್ಯು

0
image_editor_output_image-909154500-1646114234851.jpg

ವಾಷಿಂಗ್ಟನ್: ಬಂದೂಕುಧಾರಿಯೊಬ್ಬ ಚರ್ಚ್ ನೊಳಗೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ಸೋಮವಾರ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿ ನಡೆದಿರುವುದಾಗಿ ಬಿಎನ್ ಒ ನ್ಯೂಸ್ ವರದಿ ಮಾಡಿದೆ.

ಸ್ಯಾಕ್ಟಮೆಂಟೋ ಚರ್ಚ್ ನೊಳಗೆ ಬಂದೂಕುಧಾರಿ ತನ್ನ ಮೂವರು ಮಕ್ಕಳು ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಹತ್ಯೆಗೈದ ನಂತರ ತನಗೇ ತಾನು ಗುಂಡಿಕ್ಕಿಕೊಂಡು ಸಾವನ್ನಪ್ಪಿರುವುದಾಗಿ ಸ್ಯಾಕ್ರಮೆಂಟೋ ಕೌಂಟಿ ಷರೀಫ್ಸ್ ವಕ್ತಾರ ಸಾರ್ಜೆಂಟ್ ರಾಡ್ ಗ್ರಾಸ್ ಮನ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ನಾಲ್ಕನೇ ವ್ಯಕ್ತಿಯ ಗುರುತು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ ಎಂದು ಗ್ರಾಸ್ ಮನ್ ತಿಳಿಸಿದ್ದು, ಚರ್ಚ್ ನೊಳಗೆ ಸೋಮವಾರ ಸಂಜೆ ಏಕಾಏಕಿ ಗುಂಡಿನ ದಾಳಿಯ ಸದ್ದು ಕೇಳಿಬಂದಿರುವುದಾಗಿ ಚರ್ಚ್ ನ ಕೆಲಸಗಾರರು ತಿಳಿಸಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು ಎಂದು ವರದಿ ವಿವರಿಸಿದೆ.

Leave a Reply

Your email address will not be published. Required fields are marked *

error: Content is protected !!