ಕಣ್ಣೂರು: ಸಿಪಿಎಂ ಕಾರ್ಯಕರ್ತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ಕಣ್ಣೂರು: ಸಿಪಿಎಂ ಕಾರ್ಯಕರ್ತರೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದಾರುಣ ಘಟನೆ ತಲಶ್ಯೇರಿ ಸಮೀಪದ ಪುನ್ನಾಳ್ ಎಂಬಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಸಿಪಿಎಂ ಕಾರ್ಯಕರ್ತ ಹರಿದಾಸನ್ ( 54) ಮೃತಪಟ್ಟವರು. ಕೃತ್ಯದ ಹಿಂದೆ ಆರ್.ಎಸ್. ಎಸ್ – ಬಿಜೆಪಿ ಕೈವಾಡ ಇದೆ ಎಂದು ಸಿಪಿಎಂ ಆರೋಪಿಸಿದ್ದು , ತಲಶ್ಯೇರಿ ನಗರಸಭೆ ಹಾಗೂ ನ್ಯೂ ಮಾಹೆ ಗ್ರಾಮ ಪಂಚಾಯತ್ ವ್ಯಾಪ್ತಿ ಯಲ್ಲಿ ಇಂದು ಹರತಾಳಕ್ಕೆ ಕರೆ ನೀಡಿದೆ.
ಸಿಪಿಎಂನ ಸಕ್ರಿಯ ಕಾರ್ಯಕರ್ತರಾಗಿದ್ದ ಹರಿದಾಸನ್’ರವರು ವೃತ್ತಿಯಲ್ಲಿಮೀನುಗಾರರಾಗಿದ್ದರು. ಮುಂಜಾನೆ ಕೆಲಸ ಮುಗಿಸಿ ಮನೆ ಮರಳುತ್ತಿದ್ದಾಗ ಮನೆ ಸಮೀಪ ಹೊಂಚು ಹಾಕಿ ಕುಳಿತಿದ್ದ ತಂಡವು ದಾಳಿ ನಡೆಸಿದ್ದು ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಬಂದಾಗ ತಂಡವು ವಾಹನ ದಲ್ಲಿ ಪರಾರಿಯಾಗಿದೆ. ಗಂಭೀರ ಗಾಯಗೊಂಡ ಹರಿದಾಸನ್ ರವರನ್ನು ಸ್ಥಳೀಯರು ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು.




