March 21, 2026

ಬೆಳ್ತಂಗಡಿ: ಮುಂಡಾಜೆ ನೇತ್ರಾವತಿ ನದಿಯಲ್ಲಿ ಮುಳುಗಿ ಯುವಕ ಮೃತ್ಯು

0
IMG-20220221-WA0002.jpg

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಪರಮುಖ ಎಂಬಲ್ಲಿ ನೇತ್ರಾವತಿ ನದಿಗೆ ಸ್ನಾನಕ್ಕೆಂದು ಹೋಗಿದ್ದ ಕಬಕದ ಯುವಕನೋರ್ವ ನದಿ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ಸಂಭವಿಸಿದೆ.

ನಾಪತ್ತೆಯಾದ ಯುವಕ ಪುತ್ತೂರು ತಾಲೂಕು ಕಬಕ ನಿವಾಸಿ ಸುಂದರಿ ಎಂಬವರ ಪುತ್ರ ಕಿರಣ್ ( 20) ಎಂಬವರೆಂದು ತಿಳಿದುಬಂದಿದೆ.

ತನ್ನ ಅಜ್ಜಿಮನೆ ಮುಂಡಾಜೆಯ ಪರಮುಖಕ್ಕೆ ಬಂದಿದ್ದ ಸಂದರ್ಭ ಭಾನುವಾರ ಸಂಜೆಯ ವೇಳೆ ಸಹೋದರನ ಜೊತೆ ನದಿಗೆ ಹೋಗಿದ್ದು ಈ ವೇಳೆ ಆಕಸ್ಮಿಕ ಘಟನೆ ನಡೆದಿದೆ ಎನ್ನಲಾಗಿದೆ.

ಧರ್ಮಸ್ಥಳ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಪತ್ತೆಹಚ್ಚಿದ್ದಾರೆ.

Leave a Reply

Your email address will not be published. Required fields are marked *

error: Content is protected !!