July 4, 2026

ಪಡುಬಿದ್ರಿ: ಸಮುದ್ರದಲ್ಲಿ ಮುಳುಗಿ ಯುವಕ ಮೃತ್ಯು:
ತನ್ನಿಬ್ಬಿರು ಸ್ನೇಹಿತರ ಜೊತೆ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕ

0
IMG-20220221-WA0001.jpg

ಪಡುಬಿದ್ರಿ: ತನ್ನಿಬ್ಬರು ಗೆಳೆಯರೊಂದಿಗೆ ಕಡಲಿಗೆ ಈಜಲು ಹೋಗಿ ಫೆ. 19ರಂದು ನಾಪತ್ತೆಯಾಗಿದ್ದ ಪಡುಬಿದ್ರಿ ನಡಾಲು ಅಡಿಪುತೋಟ ನಿವಾಸಿ ರಘುರಾಮ ದೇವಾಡಿಗ ಅವರ ಪುತ್ರ ಧನುಷ್ (19) ಅವರ ಮೃತದೇಹ ಭಾನುವಾರ ಪಡುಬಿದ್ರಿ ಕಾಡಿಪಟ್ಲ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.

ಆತನೊಂದಿಗೆ ಈಜಲು ಹೋಗಿದ್ದ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದರು. ಧನುಷ್ ತಂದೆ ತಾಯಿ ಹಾಗೂ ಕಿರಿಯ ಸಹೋದರನನ್ನು ಅಗಲಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹ ಬಿಟ್ಟುಕೊಡಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!