February 3, 2026

ಮಂಗಳೂರು: ಕಳ್ಳತನ ಪ್ರಕರಣದ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ಸಾವು

0
Screenshot_2022-02-19-10-47-19-72_680d03679600f7af0b4c700c6b270fe7.jpg

ಮಂಗಳೂರು: ನಗರದಲ್ಲಿ ನಡೆದ ಕಳ್ಳತನ ಪ್ರಕರಣ ವೊಂದಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಲ್ಲಿ ಓರ್ವ ಪೊಲೀಸ್‌ ಕಸ್ಟಡಿಯಲ್ಲಿರುವಾಗಲೇ ಹಠಾತ್‌ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಆದೇಶಿಸಿದ್ದಾರೆ. ನಗರದ ಉರ್ವ ಮಾರ್ಕೆಟ್‌ ಸಮೀಪದ ನಿವಾಸಿ ರಾಜೇಶ್‌ (30) ಸಾವನ್ನಪ್ಪಿದ ಯುವಕ.

ಇನ್ನೋರ್ವ ಆರೋಪಿಯನ್ನು ಸುರತ್ಕಲ್‌ನ ಸತೀಶ (35) ಎಂದು ಗುರುತಿಸಲಾಗಿದೆ ನಗರದ ಬಂದರು ಠಾಣೆ ಪೊಲೀಸರು ಶುಕ್ರವಾರ ಬೆಳಗ್ಗಿನ ಜಾವ 3.30ರ ವೇಳೆಗೆ ನಗರದಲ್ಲಿ ಗಸ್ತು ತಿರುಗುತ್ತಿದ್ದಾಗ, ಕೆಎಂಸಿ ಜ್ಯೋತಿ ಜಂಕ್ಷನ್‌ ಬಳಿ ಸ್ಮಾರ್ಟ್‌ ಸಿಟಿಗೆ ಸೇರಿದ ಕಬ್ಬಿಣ ಸರಳುಗಳನ್ನು ಇಬ್ಬರು ಕದ್ದುಕೊಂಡು ಹೋಗುತ್ತಿರುವುದು ಗಮನಕ್ಕೆ ಬಂದಿದೆ.

ಕೂಡಲೇ ಗಸ್ತು ನಿರತ ಪೊಲೀಸರು ಅವರನ್ನು ಹಿಡಿದು, ಠಾಣೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆರೋಪಿಗಳಿಬ್ಬರನ್ನು ಬಂದರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಆದರೆ ಅಪರಾಹ್ನ 3.20ರ ವೇಳೆಗೆ ರಾಜೇಶ್‌ನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ತತ್‌ಕ್ಷಣ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಅಷ್ಟರಲ್ಲಾಗಲೇ ರಾಜೇಶ್‌ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!