March 21, 2026

ಹಿಜಾಬ್ ಗಾಗಿ ಹೋರಾಟ ಮಾಡುತ್ತಿರುವ ಉಡುಪಿ ಹೆಣ್ಣುಮಕ್ಕಳ ವೈಯಕ್ತಿಕ ವಿವರ ಪೋಸ್ಟ್‌‌ ಮಾಡಿದ್ದ ನಳಿನ್ ಕುಮಾರ್ ಕಟೀಲು: ಟ್ವೀಟ್‌ ರದ್ದು ಮಾಡಿದ ಟ್ವಿಟರ್‌‌

0
Screenshot_2022-02-17-11-16-12-90_680d03679600f7af0b4c700c6b270fe7.jpg

ಮಂಗಳೂರು: ಹಿಜಾಬ್‌ಗಾಗಿ ಹೋರಾಡುತ್ತಿರುವ ಉಡುಪಿ ಹೆಣ್ಣುಮಕ್ಕಳ ವೈಯಕ್ತಿಕ ವಿವರಗಳನ್ನು ಹಂಚಿಕೊಂಡಿರುವ ಕರ್ನಾಟಕ ಬಿಜೆಪಿ ಟ್ವಿಟರ್‌ ಖಾತೆಯ ಟ್ವೀಟ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಅವರ ಟ್ವೀಟ್‌ಅನ್ನು ಟ್ವಿಟರ್‌ ಸಂಸ್ಥೆ ರದ್ದು ಮಾಡಿದೆ.

ಟ್ವಿಟರ್‌ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಗುರುತಿಸಿರುವ ಟ್ವಿಟರ್‌ ಸಂಸ್ಥೆಯು, ಟ್ವೀಟ್‌ಗಳನ್ನು ತೆಗೆದುಹಾಕಿದೆ.

ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನೆಪದಲ್ಲಿ, ವಿದ್ಯಾರ್ಥಿನಿಯರ ವಿಳಾಸ, ವಯಸ್ಸು, ತಂದೆತಾಯಿಯ ಹೆಸರು ಇತ್ಯಾದಿ ವಿವರಗಳನ್ನು ಪೋಸ್ಟ್‌ ಮಾಡಲಾಗಿತ್ತು.

“ಅಪ್ರಾಪ್ತ ಹೆಣ್ಣುಮಕ್ಕಳ ವಿವರಗಳನ್ನು ಹಂಚಿಕೊಳ್ಳುವುದು ಟ್ವಿಟರ್‌ ಪಾಲಿಸಿಗೆ ವಿರುದ್ಧವೇ?” ಎಂದು ಆಲ್ಟ್‌ ನ್ಯೂಸ್‌‌ನ ಸಹಸಂಸ್ಥಾಪಕರಾದ, ಖ್ಯಾತ ಪತ್ರಕರ್ತ ಮೊಹಮ್ಮದ್‌ ಜುಬೈರ್‌ ಪ್ರಶ್ನಿಸಿದ್ದರು. ಈ ಸಂಬಂಧ ‘ನಾನುಗೌರಿ.ಕಾಂ’ ಕೂಡ ವರದಿ ಮಾಡಿತ್ತು.

Leave a Reply

Your email address will not be published. Required fields are marked *

error: Content is protected !!