March 21, 2026

ಆಗ್ರಾ: ತಾಜ್‌ ಮಹಲ್‌ನಲ್ಲಿ ಹನುಮಾನ್ ಚಾಲೀಸ ಪಠಿಸಲು ವಿಶ್ವ ಹಿಂದು ಪರಿಷತ್‌ ಕಾರ್ಯಕರ್ತರಿಂದ ಯತ್ನ

0
image_editor_output_image-1003490617-1644990377886.jpg

ಆಗ್ರಾ: ತಾಜ್‌ ಮಹಲ್‌ನಲ್ಲಿ ಹನುಮಾನ್ ಚಾಲೀಸ ಪಠಿಸಲು ಮುಂದಾಗಿದ್ದ ವಿಶ್ವ ಹಿಂದು ಪರಿಷತ್‌ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ.

ಕರ್ನಾಟಕದ ಹಿಜಾಬ್ ವಿವಾದದ ವಿರುದ್ಧ ಪ್ರತಿಭಟನೆ ಮಾಡುವ ಸಲುವಾಗಿ ವಿವಿಧ ಸಂಘಟನೆಯ ಕಾರ್ಯಕರ್ತರು ತಾಜ್ ಮಹಲ್‌ ಪ್ರವೇಶಿಸಿ ಅಲ್ಲಿ ಹನುಮಾನ್ ಚಾಲೀಸ ಪಠಿಸಲು ಉದ್ದೇಶಿಸಿದ್ದರು.

ಪ್ರತಿಭಟನಾಕಾರರು ಹಿಜಾಬ್‌ಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಅವರು ತಾಹ್ ಮಹಲ್ ಪ್ರವೇಶಿಸುವುದನ್ನು ತಡೆಯಲಾಗಿದೆ ಎಂದು ಸರ್ಕಲ್ ಅಧಿಕಾರಿ ರಾಜೀವ್ ಕುಮಾರ್ ತಿಳಿಸಿದ್ದಾರೆ.

ತಾಜ್ ಮಹಲ್ ಎನ್ನುವುದು ‘ತೇಜೋ ಮಹಲ್‘ ಆಗಿದೆ. ಹೀಗಾಗಿ ಅಲ್ಲಿ ಹನುಮಾನ್ ಚಾಲೀಸ ಪಠಿಸಲು ತೆರಳುತ್ತಿದ್ದೆವು. ಆದರೆ ಪೊಲೀಸರು ನಮ್ಮನ್ನು ತಡೆದಿದ್ದಾರೆ ಎಂದು ವಿಶ್ವ ಹಿಂದು ಪರಿಷತ್‌ನ ಅಶೀಶ್ ಆರ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!