ಮಂಗಳೂರು: ಕ್ಯೂ ಆರ್ ಕೋಡ್ ಕಳುಹಿಸಿ 96,996 ರೂ. ವಂಚನೆ
ಮಂಗಳೂರು: ನಗರದ ಕಂಪೆನಿಯೊಂದರ ಮ್ಯಾನೇಜರ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ಕ್ಯೂ ಆರ್ ಕೋಡ್ ಕಳುಹಿಸಿ ಹಂತ ಹಂತವಾಗಿ 96,996 ರೂ. ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.
ನಗರದ ಕಂಪೆನಿಯಲ್ಲಿ ಮ್ಯಾನೇಜರ್ ಆಗಿರುವ ದೂರುದಾರ ವ್ಯಕ್ತಿಗೆ ಜ.25ರಂದು ಅಪರಿಚಿತ ವ್ಯಕ್ತಿಯೊಬ್ಬ 6900789640 ಮತ್ತು 9735403133 ಸಂಖ್ಯೆಯಿಂದ ಕರೆ ಮಾಡಿ ತಾನು ಭಾರತೀಯ ಸೇನೆಯ ಸೇವಕನಾಗಿದ್ದು ಪೀಸ್ ಪಬ್ಲಿಕ್ ಸ್ಕೂಲ್ ನ ಕಾಮಗಾರಿಗಾಗಿ 300 ಚೀಲ ಸಿಮೆಂಟ್ ಬೇಕಾಗಿದೆ ಎಂದು ತಿಳಿಸಿದ ಎನ್ನಲಾಗಿದೆ.




