ಸುಳ್ಯ :ಅರಂತೋಡು ಅಯ್ಯಂಗಾರ್ ಬೇಕರಿಯಲ್ಲಿ ಅಡುಗೆ ಗ್ಯಾಸ್ ತಾಗಿ ವ್ಯಕ್ತಿಗೆ ಗಾಯ
ಸುಳ್ಯ: ಸುಳ್ಯ ತಾಲೂಕು ಮರಕಂಜ ಗ್ರಾಮ ನಿವಾಸಿ ಮಂಜುನಾಥ ಎಂಬವರು ಅರಂತೋಡಿನ ತಮ್ಮ ಅಣ್ಣನ ಬೇಕರಿಯಲ್ಲಿ ಬ್ರೆಡ್ ಮಾಡುತ್ತಿದ್ದಾಗ ಬೆಂಕಿ ತಾಗಿ ಗಾಯಗೊಂಡ ಘಟನೆ ಫೆ.೧೪ ರಂದು ವರದಿಯಾಗಿದೆ.
ಮಂಜುನಾಥರು ಬ್ರೆಡ್ ಮಾಡಲು ಓವೆನ್‌ನ್ನು ಬಿಸಿ ಮಾಡಲು ಗ್ಯಾಸ್‌ನಲ್ಲಿಟ್ಟು ಬೆಂಕಿ ಹೊತ್ತಿಸಿದಾಗ ಅದರ ಒಳಗೆ ಗ್ಯಾಸ್ ತುಂಬಿ ತೂತಿನಿಂದ ಒಮ್ಮೆಲೇ ಗ್ಯಾಸ್ ಹೊರಬಂದು ಮಂಜುನಾಥರ ಮುಖ ಮತ್ತು ಎದೆಭಾಗಕ್ಕೆ ಬೆಂಕಿ ತಾಗಿ ಸುಟ್ಟ ಗಾಯಗಳಾಗಿದೆ.
ಕೂಡಲೇ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.




