March 21, 2026

ಸುಳ್ಯ: ರಬ್ಬರ್ ಸಾಗಾಟದ ಲಾರಿ ಪಲ್ಟಿ; ಚಾಲಕ ಗಂಭೀರ

0
IMG-20220215-WA0006.jpg

ಸುಳ್ಯ: ತಾಲೂಕಿನ ಬೆಳ್ಳಾರೆ ಸಮೀಪದ ಪಂಜಿಗಾರು ಎಂಬಲ್ಲಿ ಲಾರಿ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ.

ಬೆಳ್ಳಾರೆಯಿಂದ ಪಂಜ ಕಡೆ ರಬ್ಬರ್ ಲೋಡ್ ಮಾಡಿಕೊಂಡು ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಂಜಿಕಾರ್ ಬಳಿ ಪಲ್ಟಿಯಾಗಿದೆ.
ಪಲ್ಟಿಯಾದ ರಭಸಕ್ಕೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿಯಲ್ಲಿದ್ದ ರಬ್ಬರ್ ಶೀಟ್ ಗಳು ಎಲ್ಲಾ ರಸ್ತೆಯಲ್ಲಿ ಚದುರಿ ಹೋಗಿದೆ.

ಘಟನೆಯಿಂದ ಲಾರಿ ಚಾಲಕ ಗಂಭೀರ ಗಾಯಗೊಂಡಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಠಾಣಾ ಎಸ್.ಐ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!