December 15, 2025

ಮಲ್ಲಿಕಾರ್ಜುನ ಖರ್ಗೆ ಮೊಮ್ಮಗಳಿಗೆ ಬಂಟ್ವಾಳದ ಯುವಕನ ಜೊತೆ ಅದ್ದೂರಿ ವಿವಾಹ

0
image_editor_output_image-616452869-1635311459194.jpg

ಬಂಟ್ವಾಳ: ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೊಮ್ಮಗಳು ಬಂಟ್ವಾಳ ವೀರಕಂಬ ಮೂಲದ ಯುವಕನನ್ನು ವರಿಸಿದ್ದು ಅ.25 ರಂದು ಬೆಂಗಳೂರು ಅರಮನೆ ಸಭಾಂಗಣದಲ್ಲಿ ಅದ್ದೂರಿ ವಿವಾಹ ನಡೆದಿದೆ.

ವೀರಕಂಬ ಗ್ರಾಮದ ಗಿಳ್ಕಿಂಜದ ಎ.ಟಿ ಹರಿಶಂಕರ – ವಿಜಯಲಕ್ಷ್ಮಿ ಅವರ ಪುತ್ರ ಪಾಣಿನಿ ಭಟ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರಿ ಜಯಶ್ರೀ ಹಾಗೂ ರಾಧಾಕೃಷ್ಣ ಅವರ ಪುತ್ರಿ ಪ್ರಾರ್ಥನ ಅವರನ್ನು ವರಿಸಿದ್ದಾರೆ.

ಪಾಣಿನಿ ಭಟ್‌ ಮತ್ತು ಪ್ರಾರ್ಥನಾ ಇಬ್ಬರೂ ಕೂಡಾ ನ್ಯಾಯವಾದಿಗಳಾಗಿದ್ದು, ಸಂಸ್ಥೆಯೊಂದರಲ್ಲಿ ಕೆಲಸಕ್ಕಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯ ವಿಷಯವನ್ನು ಎರಡೂ ಕುಟುಂಬಗಳಿಗೆ ತಿಳಿಸಿ, ಮದುವೆಗೆ ಒಪ್ಪಿಸಿದ್ದಾರೆ.

ದಲಿತ ವರ್ಗದ ಹುಡುಗಿಯನ್ನು ಹವ್ಯಕ ಬ್ರಾಹ್ಮಣ ಕುಟುಂಬದ ಸೊಸೆಯಾಗಿ ಸ್ವೀಕರಿಸಿದ್ದು ಎರಡೂ ಕುಟು೦ಬಗಳ ಸಮೃತಿಯಿ೦ದ ಅದ್ಧೂರಿಯಿಂದ ಮದುವೆ ಕಾರ್ಯ ಜರುಗಿದೆ. ಸಮಾರಂಭದಲ್ಲಿ ರಾಷ್ಟ್ರ ರಾಜ್ಯದ ಗಣ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!