March 21, 2026

ಸುಳ್ಯ:ಬೆಳ್ಳಾರೆ ಪೇಟೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ವ್ಯಕ್ತಿಯ ಶವ‌ ಪತ್ತೆ

0
IMG_20220214_132705.jpg

ಸುಳ್ಯ: ಸುಳ್ಯ ತಾಲೂಕು ಬೆಳ್ಳಾರೆ ಮುಖ್ಯ ಪೇಟೆಯ ಎ.ಪಿ.ಎಂ.ಸಿ ಕಟ್ಟಡದಲ್ಲಿ ಮೃತಪಟ್ಟ ವ್ಯಕ್ತಿಯೋರ್ವರ ಶವ ಇಂದು ಬೆಳಿಗ್ಗೆ ದೊರೆತಿರುವುದಾಗಿ ತಿಳಿದು ಬಂದಿದೆ.
ನಿಂತಿಕಲ್ಲು ಆಸುಪಾಸಿನಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದ ತಮಿಳುನಾಡಿನ ಸೇಲಂ ಮೂಲದ ವ್ಯಕ್ತಿ ಗಣೇಶ ಎಂ. ( 38) ಎಂದು ಗುರುತಿಸಲಾಗಿದೆ.

ಬೆಳ್ಳಾರೆ ಪೇಟೆಯಲ್ಲಿ
ಕೂಲಿ ಕೆಲಸಕ್ಕೆ ಹೋಗುವವರು ಬೆಳ್ಳಾರೆಯ ಎ.ಪಿ.ಎಂ.ಸಿ.ಸಂತೆಮಾರುಕಟ್ಟೆಯಲ್ಲಿ ಶವ ಬಿದ್ದಿರುವುದನ್ನು ಕಂಡು ಬೆಳ್ಳಾರೆ ಠಾಣೆಗೆ ತಿಳಿಸಿದರೆನ್ನಲಾಗಿದೆ.
ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈತ ಕೆಲ ಸಮಯದಿಂದ ಬೆಳ್ಳಾರೆ ಪೇಟೆಯಲ್ಲಿ ವಿಪರೀತ ಮದ್ಯಪಾನ ಮಾಡಿ ಯಾವುದೇ ಆಹಾರ ಸೇವಿಸದೆ ತಿರುಗುತ್ತಿದ್ದನೆನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!