March 21, 2026

ವಿದ್ಯುತ್ ದರ ಪ್ರತಿ ಯುನಿಟ್ ಗೆ ೩೦ ಪೈಸೆ ಹೆಚ್ಚಳ ಬಹುತೇಕ ನಿಶ್ಚಿತ

0
Screenshot_2022-02-14-11-26-51-75_680d03679600f7af0b4c700c6b270fe7.jpg

ಬೆಂಗಳೂರು : ರಾಜ್ಯದ ಜನತೆಗೆ ಸರಕಾರ ವಿದ್ಯುತ್ ಶಾಕ್ ನೀಡುವುದು ಬಹುತೇಕ ನಿಶ್ಚಿತವಾಗಿದ್ದು ಪ್ರತಿ ಯುನಿಟ್ ಮೇಲೆ ೩೦ ಪೈಸೆ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ವಿದ್ಯುತ್ ದರ ಏರಿಕೆಗೆ ಸಂಬಂಧಪಟ್ಟಂತೆ ಎಲ್ಲ ಎಸ್ಕಾಂಗಳಿಂದ ಕೆಇಆರ್ ಸಿಗೆ ಪ್ರಸ್ತಾಪ ಸಲ್ಲಿಕೆಯಾಗಿದೆ. ಈ ಸಂಬಂಧ ಕೆಇಆರ್ಸಿ ಸಾರ್ವಜನಿಕರು ಹಾಗೂ ಉದ್ಯಮಿಗಳಿಂದ ಆಕ್ಷೇಪಣೆ ಆಹ್ವಾನಿಸಿದ್ದು, ಕಳೆದ ಎರಡು ದಿನಗಳಿಂದ ಬೆಂಗಳೂರಿನ ಬೆಸ್ಕಾಂ ಕಚೇರಿಯಲ್ಲಿ ವಿಚಾರಣೆಯೂ ಆರಂಭವಾಗಿದೆ.

ಪ್ರತಿ ಯೂನಿಟ್‍ಗೆ ೧.೫೦ ಪೈಸೆ ಹೆಚ್ಚಳಕ್ಕೆ ಹೆಸ್ಕಾಂಗಳು ಪ್ರಸ್ತಾಪ ಸಲ್ಲಿಸಿವೆ. ಇದರಲ್ಲಿ ಗೃಹ ಬಳಕೆ ಹಾಗೂ ವಾಣಿಜ್ಯ ಎಂದು ಎರಡು ವಿಭಾಗವಿದ್ದು, ಗೃಹ ಬಳಜೆ ವಿದ್ಯುತ್ ದರ ಪ್ರತಿ ಯುನಿಟ್ ಗೆ 30 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೆಈಆರ್ ಸಿ ಮೂಲಗಳಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!