March 21, 2026

ಶ್ರೀಹರಿಕೋಟ: ಮೂರು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೊ

0
image_editor_output_image624932558-1644817453665.jpg

ಶ್ರೀಹರಿಕೋಟ: ಭೂವೀಕ್ಷಣಾ ಉಪಗ್ರಹ ‘ಇಒಎಸ್‌–04’ ಸೇರಿದಂತೆ ಒಟ್ಟು ಮೂರು ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸೋಮವಾರ ಮುಂಜಾನೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.

2022ರಲ್ಲಿ ಇಸ್ರೊ ನಡೆಸಿದ ಮೊದಲ ಉಪಗ್ರಹ ಉಡಾವಣೆ ಇದಾಗಿದೆ.

ಇಒಎಸ್‌–04, ಇನ್‌ಸ್ಪೈರ್‌ಸ್ಯಾಟ್‌–1 ಹಾಗೂ ಐಎನ್‌ಎಸ್‌–2ಬಿ ಉಪಗ್ರಹಗಳನ್ನು ಹೊತ್ತ ‘ಪಿಎಸ್‌ಎಲ್‌ವಿ–ಸಿ52’ ರಾಕೆಟ್ ಬೆಳಿಗ್ಗೆ 5.59ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು ಎಂದು ಇಸ್ರೊ ತಿಳಿಸಿದೆ. ಇದೊಂದು ಅದ್ಭುತ ಸಾಧನೆ ಎಂದೂ ಸಂಸ್ಥೆ ಬಣ್ಣಿಸಿದೆ.

ಮೂರೂ ಉಪಗ್ರಹಗಳನ್ನು ‘ಪಿಎಸ್‌ಎಲ್‌ವಿ–ಸಿ52’ ಬೆಳಿಗ್ಗೆ 6.17ರ ವೇಳೆಗೆ ಕಕ್ಷೆಗೆ ಸೇರಿಸಿದೆ. ‘ಇಒಎಸ್‌–04’ ಉಪಗ್ರಹವನ್ನು 529 ಕಿ.ಮೀ. ಎತ್ತರದ ಧ್ರುವೀಯ ಕಕ್ಷೆಗೆ ಸೇರಿಸಿದೆ ಎಂದು ಇಸ್ರೊ ಹೇಳಿದೆ.

Leave a Reply

Your email address will not be published. Required fields are marked *

error: Content is protected !!