February 4, 2026

ಮಂಗಳೂರು: ಮೀನು ಲಾರಿ ಪಲ್ಟಿ: ಚಾಲಕನಿಗೆ ಗಂಭೀರ ಗಾಯ, ರಸ್ತೆಯಿಡೀ ಮತ್ಸ್ಯ ರಾಶಿ!

0
IMG-20220213-WA0039.jpg

ಮಂಗಳೂರು: ನಗರ ಹೊರವಲಯದ ಸುರತ್ಕಲ್ ಸಮೀಪದ ಮುಕ್ಕ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಮೀನಿನ ಲಾರಿಯೊಂದು ಪಲ್ಟಿಯಾಗಿದೆ.

ಲಾರಿ ಪಲ್ಟಿಯಾದ ರಭಸಕ್ಕೆ ರಸ್ತೆಯಿಡೀ ಮೀನು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದೆ. ಅಪಘಾತದಲ್ಲಿ ಲಾರಿ ಚಾಲಕ ಗಂಭೀರ ಗಾಯಗೊಂಡಿದ್ದಾನೆ.

ಈ ಲಾರಿಯು ಉಡುಪಿ ಕಡೆಯಿಂದ ಉಳ್ಳಾಲದ ಕಡೆಗೆ ಹೋಗ್ತಿತ್ತು. ಲಾರಿ ಪಲ್ಟಿಯಾದ ಪರಿಣಾಮ ಹೆದ್ದಾರಿ ಸಂಚಾರ ಕೆಲಹೊತ್ತು ಅಸ್ತವ್ಯಸ್ತಗೊಂಡಿತು.

Leave a Reply

Your email address will not be published. Required fields are marked *

You may have missed

error: Content is protected !!