March 21, 2026

ಶಾಲಾ ಪ್ರಾರಂಭ ಹಿನ್ನೆಲೆ ಮಂಗಳೂರಿನಲ್ಲೂ ನಿಷೇಧಾಜ್ಞೆ: ಮಂಗಳೂರಿನ ಶಾಲಾ, ಕಾಲೇಜುಗಳ  ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ

0
IMG_20220211_180903.jpg

ಮಂಗಳೂರು : ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಶಾಲಾ, ಕಾಲೇಜುಗಳ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಮಂಗಳೂರು ಕಮಿಷನರ್ ಶಶಿಕುಮಾರ್ ಆದೇಶ ಮಾಡಿದ್ದಾರೆ.

ಪ್ರೌಢಶಾಲೆಗಳಿಗೆ ಸೋಮವಾರದಿಂದ ಶಾಲೆ ಆರಂಭಗೊಳ್ಳುತ್ತಿದೆ. ಫೆ.16ರಿಂದ ಕಾಲೇಜು ಕೂಡ ಆರಂಭಗೊಳ್ಳುವ ಸಾಧ್ಯತೆಯಿದ್ದು ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ರಾಜ್ಯ ಸರಕಾರ ಆಯಾ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕ್ರಮ ವಹಿಸಲು ಪೊಲೀಸರು ಮುಂದಾಗಿದ್ದಾರೆ.

ಮಂಗಳೂರು ನಗರ ವ್ಯಾಪ್ತಿಯಲ್ಲಿ ಫೆ.14ರ ಬೆಳಗ್ಗೆ 6ರಿಂದ ಫೆ.19ರ ಸಂಜೆಯ ವರೆಗೆ ಸದ್ಯಕ್ಕೆ ಸೆಕ್ಷನ್ ಹಾಕಲಾಗಿದೆ. ಈ ವೇಳೆ, ಯಾವುದೇ ರೀತಿಯಲ್ಲಿ ಗುಂಪು ಕೂಡುವುದು, ಘೋಷಣೆ ಕೂಗುವುದು, ಐದಕ್ಕಿಂತ ಹೆಚ್ಚು ಜನರು ಸೇರುವುದು ನಿಷಿದ್ಧವಾಗಿದೆ. ಅಲ್ಲದೆ, ಆಯಾ ಭಾಗದ ಜನರು ಹೊರತುಪಡಿಸಿ ಇತರೇ ಮಂದಿ ಶಾಲೆಯ ಆವರಣಕ್ಕೆ ಬರುವಂತಿಲ್ಲ. ಹಿಜಾಬ್ ಸಂಘರ್ಷದ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ರೀತಿಯ ಸ್ಥಿತಿಯನ್ನು ಎದುರಿಸಲು ರಾಜ್ಯ ಸರಕಾರ ಆಯಾ ಜಿಲ್ಲಾಡಳಿತಗಳಿಗೆ ಪೂರ್ಣ ರೀತಿಯ ಅಧಿಕಾರ ನೀಡಿದೆ.

Leave a Reply

Your email address will not be published. Required fields are marked *

error: Content is protected !!