ಮುಷ್ಕರದ ವೇಳೆ ಅಮಾನತುಗೊಂಡಿದ್ದ 1,500 ನೌಕರರ ವಾಪಸ್ ಪಡೆಯಲು ಆದೇಶ
ಬೆಂಗಳೂರು: ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಕೋರಿ ಮುಷ್ಕರ ನಡೆಸಿದ್ದ ನೌಕರರಲ್ಲಿ ಈಗಾಗಲೇ 1500 ಜನರನ್ನು ಅಮಾನತುಗೊಂಡವರನ್ನು ವಾಪಸ್ ಪಡೆಯಲಾಗಿದೆ, ಪ್ರತಿಭಟನೆ ವೇಳೆ ಭಾಗಿಯಾಗಿದ್ದ ನೌಕರರನ್ನು ನೌಕರಿಯಿಂದ ವಜಾ ಮಾಡಲಾಗಿತ್ತು. ಇದೀಗ ಅವರನ್ನೆಲ್ಲ ಮರು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಪ್ರತಿಭಟನೆ ವೇಳೆ ಭಾಗಿಯಾಗಿದ್ದ ನೌಕರರನ್ನು ನೌಕರಿಯಿಂದ ವಜಾ ಮಾಡಲಾಗಿತ್ತು. ಇದೀಗ ಅವರನ್ನೆಲ್ಲ ಮರು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇಂದು 100 ನೌಕರರು, ನಾಳೆ 200 ನೌಕರರ ಮರು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಕೋರಿ ಮುಷ್ಕರ ನಡೆಸಿದ್ದ ನೌಕರರಲ್ಲಿ ಈಗಾಗಲೇ 1500 ಜನರನ್ನು ಅಮಾನತುಗೊಂಡವರನ್ನು ವಾಪಸ್ ಪಡೆಯಲಾಗಿದೆ. 1353 ಜನರು ವಜಾಗೊಂಡಿದ್ದಾರೆ, ವಜಾಗೊಂಡವರನ್ನು ವಾಪಸ್ ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ಮಾನವೀಯತೆಯ ದೃಷ್ಟಿಯಿಂದ. ಮರು ನೇಮಕ ಆದೇಶ ನೀಡಲಾಗುತ್ತಿದೆ, ಮೊದಲ ಹಂತದಲ್ಲಿ 100 ಜನರಿಗೆ ನೇಮಕ ಮಾಡಲಾಗುತ್ತಿದೆ ಉಳಿದವರಿಗೆ ಹಂತ ಹಂತವಾಗಿ ಮರು ನೇಮಕ ಮಾಡಲಾಗುತ್ತಿದೆ. ಈ ತಿಂಗಳ ಒಳಗೆ 700 ಮಂದಿಗೆ ನೇಮಕಾತಿ ನೀಡಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದರು.




