March 23, 2026

ಪುತ್ತೂರು ಎ ಸಿ ಗಿರೀಶ್ ನಂದನ್ ಸುಳ್ಯಕ್ಕೆ ಭೇಟಿ

0
IMG_20220210_143531.jpg

ಸುಳ್ಯ: ಪುತ್ತೂರು ಉಪವಿಭಾಗಾಧಿಕಾರಿ ಡಾಕ್ಟರ್ ಯತೀಶ್ ಉಳ್ಳಾಲ್ ರವರ ವರ್ಗಾವಣೆ ಬಳಿಕ ನೂತನವಾಗಿ ಅಧಿಕಾರ ವಹಿಸಿಕೊಂಡ ಕೆಎಎಸ್ ಅಧಿಕಾರಿ ಗಿರೀಶ್ ನಂದನ್ ಎಂ ರವರು ಇಂದು ಸುಳ್ಯ ತಾಲೂಕು ಕಚೇರಿಗೆ ಭೇಟಿ ನೀಡಿ ವಿವಿಧ ಇಲಾಖೆಗಳ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಸುಳ್ಯ ತಹಶೀಲ್ದಾರ್ ಕುಮಾರಿ ಅನಿತಾಲಕ್ಷ್ಮಿ ಅಧಿಕಾರ ವಹಿಸಿಕೊಂಡು ಪ್ರಪ್ರಥಮ ಬಾರಿಗೆ ಸುಳ್ಯಕ್ಕೆ ಆಗಮಿಸಿದ ಎ ಸಿ ಗಿರೀಶ್ ನಂದನ್ ಎಂ ರವರನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎ ಸಿ ಇಂದು ಸುಳ್ಯದಲ್ಲಿ ಡಿವಿಜನ್ ಕೋರ್ಟ್ ಕಾರ್ಯಕ್ರಮಕ್ಕೆ ಭಾಗವಹಿಸಿದ್ದು, ರೆವಿನ್ಯೂ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ ನಿರ್ದೇಶನಗಳನ್ನು ನೀಡಲಾಗುತ್ತದೆ ಎಂದು ಹೇಳಿದರು. ಸಂಜೆ 4 ಗಂಟೆಯ ತನಕ ಸುಳ್ಯ ತಾಲೂಕು ಕಚೇರಿಯಲ್ಲಿ ಇದ್ದು ಸಾರ್ವಜನಿಕರಿಗೆ ಏನಾದರೂ ಸಮಸ್ಯೆಗಳಿದ್ದರೆ ಮಾತನಾಡಲು ಅವಕಾಶ ಕಲ್ಪಿಸುವುದಾಗಿ ಹೇಳಿದರು.

ಇದೇ ವೇಳೆ ನಗರ ಪಂಚಾಯಿತಿ ಆವರಣದಲ್ಲಿ ಸಂಗ್ರಹಿಸಿರುವ ಕಸದ ಬಗ್ಗೆ ವರದಿಗಾರರು ಕೇಳಿದಾಗ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!