March 21, 2026

ಕಡಬದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ: ಹಣ-ಚಿನ್ನಾಭರಣ ಭಸ್ಮ

0
IMG_20220207_191245.jpg

ಕಡಬ: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಗೆ ಬೆಂಕಿ ಬಿದ್ದು, ಹಣ ಹಾಗೂ ಚಿನ್ನಾಭರಣ ಬೆಂಕಿಗಾಹುತಿಯಾದ ಘಟನೆ ಕಡಬದ ಪೆರಾಬೆ ಗ್ರಾಮದ ಕುಂತೂರಿನಲ್ಲಿ ನಡೆದಿದೆ.

ಮುಡಿಪಿನಡ್ಕ ನಿವಾಸಿ ಸಿದ್ದೀಕ್ ಎ.ಎಸ್ ರವರ ಹಂಚಿನ ಮನೆಗೆ ಇಂದು ಏಕಾಏಕಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ತಗುಲಿದೆ.

ಘಟನೆ ವೇಳೆ ಮನೆಯಲ್ಲಿ ಸಿದ್ದೀಕ್ ರವರ ಅತ್ತಿಗೆ ಹಾಗೂ ಮಗು ಇತ್ತು. ಬೆಂಕಿ ಹತ್ತಿದಾಕ್ಷಣ ಹೊರ ಬಂದಿದ್ದರು ಎನ್ನಲಾಗಿದೆ.

ಘಟನೆಯಲ್ಲಿ ಮನೆಯಲ್ಲಿದ್ದ 5 ಪವನ್ ಬಂಗಾರ, 40 ಸಾವಿರ ರೂ.ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!