March 21, 2026

ಹಿಜಾಬ್ ವಿವಾದ: ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ರಿಗೆ ಕೊಲೆ ಬೆದರಿಕೆ

0
images-26.jpeg

ಮಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೆ ಏರಿದ್ದು, ಭಾರಿ ಚರ್ಚೆಗೆ ಗುರಿಯಾಗುತ್ತಿದೆ. ಇದೆ ವೇಳೆ ಹಿಜಾಬ್ ಕುರಿತು ಸರಕಾರದ ನಿಲುವಿಗೆ ಸಮರ್ಥನೆ ವ್ಯಕ್ತ ಪಡಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಿಗೆ ಕೊಲೆ ಬೆದರಿಕೆ ಹಾಕಲಾಗಿದೆ.

ಬಿಜೆಪಿ ನಾಯಕ ರಹೀಮ್ ಉಚ್ಚಿಲ್ ಅವರಿಗೆ ಮೊಬೈಲ್ ಮೂಲಕ ಬೆದರಿಕೆ ಕರೆ ಮಾಡಲಾಗಿದ್ದು, ಮಂಗಳೂರು ದಕ್ಷಿಣ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಂಗಳೂರು ಪೊಲೀಸರು ಮೊಬೈಲ್ ಸಂಖ್ಯೆಯ ಮೂಲಕ ತನಿಖೆ ನಡೆಸುತ್ತಿದ್ದಾರೆ.

ಇಂತಹ ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ರಹೀಮ್ ಉಚ್ಚಿಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!