February 2, 2026

ಹಿಜಾಬ್ ವಿವಾದ: ವಿಧ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಹತ್ತಿಕ್ಕುವ ಹುನ್ನಾರ; ಎಸ್.ಕೆ.ಜೆ.ಎಂ

0
IMG_20220201_222112.jpg

ಉಡುಪಿ: ಉಡುಪಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಅನ್ನು ನೆಪವಾಗಿಟ್ಟು ಕೊಂಡು ಕೆಲವು ಶಿಕ್ಷಣ ಸಂಸ್ಥೆಗಳಿಂದ ವಿಧ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಹತ್ತಿಕ್ಕುವ ಸಂವಿಧಾನ ವಿರೋಧಿ ಪ್ರಕ್ರಿಯೆಗಳು ದೈನಂದಿನ ಹೆಚ್ಚುತ್ತಿದೆ.

ಮೇಲ್ನೋಟಕ್ಕೆ ಒಂದು ಸಮುದಾಯದ ಸಾಕ್ಷರತೆಯ ಮೇಲುಗೈಯನ್ನು ಸಹಿಸಲಾಗದೇ ಈ ರೀತಿಯ ಹುನ್ನಾರಗಳು ನಡೆಯುತ್ತಿದೆ ಎಂದು ಸಮಸ್ತ ಕೇರಳ ಜಂಇಯತುಲ್ ಮುಅಲ್ಲಿಮೀನ್ ಉಡುಪಿ ಜಿಲ್ಲಾ ಇದರ ಕಾರ್ಯದರ್ಶಿ ಹಂಝ ಫೈಝಿ ತೋಡಾರ್ ಹೇಳಿದ್ದಾರೆ.

ಶಾಲಾ ಕಾಲೇಜುಗಳ ಸಂವಿದಾನ ಬಾಹಿರವಾದ ಈ ರೀತಿಯ ನಡವಳಿಕೆಯನ್ನು ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಮತ್ತು ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವ ಹಾಗೂ ಧಾರ್ಮಿಕ ಸ್ವಾತಂತ್ರ್ಯ ವನ್ನು ನಿರ್ನಾಮ ಮಾಡುವ ಷಡ್ಯಂತ್ರವು ಸಹಿಸುವಂತದ್ದಲ್ಲ ಎಂದು ಸಮಿತಿಯು ತಿಳಿಸಿದೆ.

ವಾರ್ಷಿಕ ಪರೀಕ್ಷೆಯ ಸನಿಹದಲ್ಲಿದ್ದು, ಈ ರೀತಿಯ ತಾರತಮ್ಯ ನೀತಿಯು ವಿಧ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ಹಾಳು ಮಾಡುತ್ತದೆ. ಆದಷ್ಟು ಬೇಗ ತರಗತಿಯಲ್ಲಿ ವಿಧ್ಯಾರ್ಥಿಗಳ ಶಿಕ್ಷಣಕ್ಕೆ ಅನುವು ಮಾಡಿ ಕೊಡಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!