March 21, 2026

ಕುಂದಾಪುರ: ಜೂನಿಯರ್ ಕಾಲೇಜ್ ಪರಿಸರದಲ್ಲಿ ಮಾರಕಾಸ್ತ್ರ ಹಿಡಿದು ಓಡಾಟ: ಇಬ್ಬರು ಆರೋಪಿಗಳ ಬಂಧನ

0
IMG_20220205_223029.jpg

ಕುಂದಾಪುರ: ಕುಂದಾಪುರ ಜೂನಿಯರ್ ಕಾಲೇಜ್ ಪರಿಸರದಲ್ಲಿ ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಮೂವರು ಪರಾರಿಯಾಗಿದ್ದಾರೆ.

ಗಂಗೊಳ್ಳಿಯ ಹಾಜಿ ಅಬ್ದುಲ್ ಮಜೀದ್ ಪ್ರಾಯ (32) ಹಾಗು ರಜಬ್ (41) ಬಂಧಿತರಾಗಿದ್ದು, ಖಲೀಲ್, ರಿಜ್ವಾನ್ ಹಾಗೂ ಇಫೀಕರ್ ಪರಾರಿಯಾದವರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಆಪಾದಿತ ಹಾಜಿ ಅಬ್ದುಲ್ ಮಜೀದ್ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣಗಳು ದಾಖಲಾಗಿದ್ದು ಅಲ್ಲದೇ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುತ್ತಾನೆ.

ಇನ್ನು ಆಪಾದಿತ ರಜಬ್‌‌ನ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದ್ದು, ಆರೋಪಿತರು ಮತೀಯವಾಗಿ ಕೋಮು ಸಂಘರ್ಷ ಉಂಟುಮಾಡುವ ಪ್ರವೃತ್ತಿಯವರಾಗಿದ್ದು ಮಾರಕಾಯುಧಗಳೊಂದಿಗೆ ಅಕ್ರಮ ಕೂಟ ಸೇರಿ ಹಠಾತ್ ಪ್ರಚೋದನೆಯಿಂದ ಮಾರಕಾಯುಧಗಳನ್ನು ಬೀಸಿ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ಉಂಟು ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!