May 18, 2026

ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯ ಸ್ಥಿತಿ ಮತ್ತೆ ಗಂಭೀರ

0
image_editor_output_image1543656772-1644052307074.jpg

ಮುಂಬಯಿ: ಭಾರತದ ಖ್ಯಾತ ಗಾಯಕಿ,ನೈಟಿಂಗೇಲ್ ಆಫ್ ಇಂಡಿಯಾ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿದೆ ಎಂದು ಅವರ ವೈದ್ಯರು ತಿಳಿಸಿದ್ದಾರೆ.

ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ. ಪ್ರತೀತ್ ಸಂಧಾನಿ ಅವರು ಆರೋಗ್ಯ ಮಾಹಿತಿಯನ್ನು ಹಂಚಿಕೊಂಡಿರುವ ಬಗ್ಗೆ ಎಎನ್ ಐ ಸುದ್ದಿ ಪ್ರಕಟಿಸಿದ್ದು, ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿದೆ, ಅವರು ಗಂಭೀರವಾಗಿ, ವೆಂಟಿಲೇಟರ್‌ನಲ್ಲಿದ್ದಾರೆ . ಇನ್ನೂ ಐಸಿಯುನಲ್ಲಿದ್ದು, ವೈದ್ಯರ ನಿಗಾದಲ್ಲಿ ಇದ್ದಾರೆ ಎಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯ ಡಾ ಪ್ರತೀತ್ ಸಮ್ದಾನಿ ತಿಳಿಸಿದ್ದಾರೆ.

ಜನವರಿಯಲ್ಲಿ ಕೋವಿಡ್ ಪಾಸಿಟಿವ್ ಪರೀಕ್ಷೆಯ ನಂತರ ಲತಾ ಮಂಗೇಶ್ಕರ್ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 92 ವರ್ಷದ ಗಾಯಕಿಗೆ ಕೋವಿಡ್-19 ನಂತರದ ನ್ಯುಮೋನಿಯಾ ಇರುವುದು ಪತ್ತೆಯಾಗಿತ್ತು.

Leave a Reply

Your email address will not be published. Required fields are marked *

error: Content is protected !!