March 21, 2026

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ಕರ್ನಾಟಕದ ಸ್ತಬ್ಧಚಿತ್ರಕ್ಕೆ ದ್ವಿತೀಯ ಸ್ಥಾನ

0
n35615841216439820679994d86020e25754ac52e960acb0b08dcc1d8d059640a88a65369c0aa2b48aaecfd.jpg

ನವದೆಹಲಿ: ಜನವರಿ 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅತ್ಯುತ್ತಮ ಸ್ತಬ್ಧಚಿತ್ರ ವಿಭಾಗದಲ್ಲಿ ದ್ವಿತೀಯ ಸ್ಥಾನ ದೊರೆತಿದೆ ಎಂದು ತಿಳಿದು ಬಂದಿದೆ.

ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ತಜ್ಞರ ಸಮಿತಿ ಶುಕ್ರವಾರ ಪ್ರಶಸ್ತಿ ಘೋಷಿಸಿದ್ದು, ರಾಜ್ಯದ ಸ್ತಬ್ಧಚಿತ್ರವು ಕರಕುಶಲ ಕಲೆಯ ವೈಭವವನ್ನು ಬಿಂಬಿಸಿ ಗಮನ ಸೆಳೆದಿತ್ತು.

ಪ್ರಥಮ ಸ್ಥಾನವನ್ನು ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಕಾರಿಡಾರ್ ಕುರಿತ ಸ್ತಬ್ಧಚಿತ್ರ ಪಡೆದಿದ್ದು, ಮೇಘಾಲಯದ ಮಹಿಳೆಯರ ಸಹಕಾರ ಸಂಘ ಹಾಗೂ ರಾಜ್ಯದ ಸುವರ್ಣ ಮಹೋತ್ಸವ ಸಂಭ್ರಮ ಬಿಂಬಿಸುವ ಸ್ತಬ್ಧಚಿತ್ರ ತೃತೀಯ ಸ್ಥಾನಕ್ಕೆ ಪಾತ್ರವಾಗಿದೆ.

ಇನ್ನು ‘ವಂದೇ ಭಾರತಮ್’ ನೃತ್ಯ ತಂಡವು ವಿಶೇಷ‌ ಬಹುಮಾನ ಪಡೆದಿದ್ದು, ಹುಬ್ಬಳ್ಳಿಯ ಮಯೂರ ಭರತ ನೃತ್ಯ ಅಕಾಡೆಮಿಯ ನೃತ್ಯಪಟುಗಳು ಈ ತಂಡದಲ್ಲಿ ಭಾಗವಹಿಸಿದ್ದರು.

ಕೇಂದ್ರದ ವಿವಿಧ ಇಲಾಖೆಗಳ ವಿಭಾಗದಲ್ಲಿ ಶಿಕ್ಷಣ ಹಾಗೂ ನಾಗರಿಕ ವಿಮಾನಯಾನ ಸಚಿವಸಲಯಗಳ ಸ್ತಬ್ಧಚಿತ್ರಗಳು ವಿಶೇಷ ಬಹುಮಾನ ಪಡೆದಿದ್ದು, ಪಥ ಸಂಚಲನದಲ್ಲಿ ಭಾಗವಹಿಸಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ನೌಕಾದಳದ ಸಿಬ್ಬಂದಿಗೆ ವಿಶೇಷ‌ ಬಹುಮಾನ ನೀಡಲಾಗಿದೆ. ಇನ್ನು ಕೇಂದ್ರದ ಲೋಕೋಪಯೋಗಿ ಇಲಾಖೆಯ ಸುಭಾಷ್-125 ಸ್ತಬ್ಧಚಿತ್ರಕ್ಕೂ ವಿಶೇಷ ಬಹುಮಾನ ನೀಡಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!