ಅಂಬೇಡ್ಕರ್ ಭಾವಚಿತ್ರ ತೆಗೆಸಿದ ಪ್ರಕರಣ ಖಂಡಿಸಿ ಕುಷ್ಟಗಿ ಬಂದ್: ಬಿಗುವಿನ ವಾತಾವರಣ, ಪ್ರಯಾಣಿಕರ ಪರದಾಟ

ಕುಷ್ಟಗಿ: ರಾಯಚೂರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವರ್ತನೆ ಪ್ರಕರಣ ಖಂಡಿಸಿ ಮಂಗಳವಾರ ಕುಷ್ಟಗಿ ಬಂದ್ ಇಂದು ಬೆಳಗ್ಗಿನಿಂದಲೇ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಕುಷ್ಟಗಿ ಬಂದ್ ಗೆ ಎರಡ್ಮೂರು ದಿನಗಳ ಮೊದಲೇ ಘೋಷಣೆ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು ಜನ ಸಂಚಾರ ವಿರಳವಾಗಿದ್ದು, ಬೆಳಗ್ಗೆ 6 ಗಂಟೆಯಿಂದ 7 ರವರೆಗೆ ಆಯಾ ಮಾರ್ಗದ ಬಸ್ ಗಳು ನಿಲ್ದಾಣದಿಂದ ನಿರ್ಗಮಿಸಿದವು.
ಹೊರಗಿನಿಂದ ಬರುವ ಬಸ್ಸುಗಳು ಪಟ್ಟಣ ಪ್ರವೇಶಿಸದೇ ಹೊರವಲಯದಲ್ಲಿ ಪ್ರಯಾಣಿಕರನ್ನು ಇಳಿಸಿದ್ದರಿಂದ ಪ್ರಯಾಣಿಕರು ಲಗೇಜ್ ಹೊತ್ತು ಪಟ್ಟಣದೆಡೆಗೆ ಬರಲು ಪರದಾಡಿದರು. ಮತ್ತೊಂದು ಊರಿಗೆ ಹೋಗುವ ಪ್ರಯಾಣಿಕರಿಗೆ ಬಸ್ ಸಿಗದೇ ಚಡಪಡಿಸಿದರು.