March 21, 2026

ನಕಲಿ ಕೀ ಬಳಸಿ ಮನೆ ಕಳ್ಳತನ: 59 ಲಕ್ಷ ರೂ. ಸಹಿತ ಆರೋಪಿಯ ಬಂಧನ

0
Screenshot_2022-02-02-10-33-58-43_ae93b0d4e668ae3b9e42de29105ee7f0.jpg

ಬೆಂಗಳೂರು:  ಪಕ್ಕಾ ಪ್ಲ್ಯಾನ್ ಮಾಡಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿ ಮುರಳಿ ಎಂಬಾತನನ್ನು ಆರ್.ಟಿ. ನಗರ ಮತ್ತು ಹೆಬ್ಬಾಳ ಪೊಲೀಸರು ಬಂಧಿಸಿದ್ದು ಆತನಿಂದ ಸುಮಾರು 59 ಲಕ್ಷ ರು. ಮಾಲ್ಯಾದ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.

ಮಕ್ಕಳನ್ನು ಶಾಲೆಗೆ ಬಿಡಲು ಹೋದಪೋಷಕರನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಈತ,  ಅವರ ಕೀಗಳ ಫೋಟೋ ತೆಗೆದುಕೊಳ್ಳುತ್ದಿದ್ದ, ನಂತರ  ನಕಲಿ ಕೀ ಬಳಸಿ ಮನೆಗೆ ಪ್ರವೇಶಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕಾವಲ್ ಬೈರಸಂದ್ರ ನಿವಾಸಿ ಮುರುಳಿ ಖಾಸಗಿ ಸಂಸ್ಥೆಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು, ನಂತರ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಫಿಂಗರ್‌ಪ್ರಿಂಟ್, ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ಸುಳಿವುಗಳ ಆಧಾರದ ಮೇಲೆ ಡಿಸೆಂಬರ್ 12 ರಂದು ಆರ್‌ಟಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ವರದಿಯಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನ ಬಂಧಿಸಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!