November 22, 2024

ಚಿನ್ನ ಮತ್ತು ವಜ್ರದ ಮೇಲಿನ ಆಮದು ಸುಂಕ ಇಳಿಕೆ

0

ನವದೆಹಲಿ: ಆಭರಣ ಪ್ರಿಯರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಚಿನ್ನ ಮತ್ತು ವಜ್ರದ ಮೇಲಿನ ಆಮದು ಸುಂಕವನ್ನು ಇಳಿಕೆ ಮಾಡಿದೆ. 

ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ  ಚಿನ್ನ-ವಜ್ರದ ಮೇಲಿನ ಆಮದು ಸುಂಕ ಇಳಿಕೆ ಮಾಡಿ ಘೋಷಿಸಲಾಗಿದೆ.

ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಸುಂಕ ಇಳಿಕೆ, ಕಸ್ಟಮ್ಸ್ ಸುಂಕವನ್ನು ಶೇ.5ಕ್ಕೆ ಇಳಿಸಲು ನಿರ್ಧಾರ ಮಾಡಲಾಗಿದೆ. ಪರಿಣಾಮ ಚಿನ್ನ ಮತ್ತು ವಜ್ರದ ಬೆಲೆಯಲ್ಲಿ ಇಳಿಕೆಯೂಗುವ ಲಕ್ಷಣ ಗೋಚರವಾಗುತ್ತಿವೆ.

ಇದರಂತೆ ಚಪ್ಪಲಿ, ಬಟ್ಟೆಗಳು, ಮೊಬೈಲ್, ಮೊಬೈಲ್ ಚಾರ್ಜರ್ ಮೇಲಿನ ತೆರಿಗೆಯನ್ನೂ ಕೂಡ ಇಳಿಕೆ ಮಾಡಲಾಗಿದೆ. ಇದರ ಜೊತೆಗೆ ಕೃಷಿ ಉಪಕರಣ, ವಿದೇಶಿ ಉತ್ಪನ್ನಗಳ ಮೇಲಿನ ಬೆಲೆ, ಚರ್ಮದ ಉತ್ಪನ್ನಗಳ ಮೇಲಿನ ಬೆಲೆ, ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆಯನ್ನೂ ಇಳಿಕೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!