ಕೇಂದ್ರ ಬಜೆಟ್ 2022: ಇಳಿಕೆ ಕಂಡ ಸರಕುಗಳು ಯಾವುದು ಗೊತ್ತೇ?

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಕಾವೇರಿ–ಪೆನ್ನಾರ್ ನದಿ ಜೋಡಣೆಗೆ ಒಪ್ಪಿಗೆ ಸೂಚಿಸಲಾಗಿದೆ. 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಕರೆನ್ಸಿ, ಈ ವರ್ಷದಿಂದಲೇ 5ಜಿ ಜಾರಿ ಮಾಡಲು ನಿರ್ಧರಿಸಲಾಗಿದೆ. ಸಹಕಾರ ಸಂಘಗಳ ತೆರಿಗೆ ದರ ಶೇ.15ಕ್ಕೆ ಇಳಿಕೆ ಮಾಡಲಾಗಿದೆ.
ಉಳಿದಂತೆ ಈ ಸಾರಿಯ ಬಜೆಟ್‌ನಲ್ಲಿ ಕೆಲವು ಸರಕು ಸೇವೆಗಳು ಇಳಿಕೆ ಕಂಡಿವೆ. ಇದಕ್ಕೆ ಕಾರಣ ತೆರಿಗೆಯಲ್ಲಿ ಬದಲಾವಣೆ ಮಾಡದೇ ಇರುವುದು.
ಬೆಲೆ ಇಳಿಕೆ?
ಮೊಬೈಲ್ ಮತ್ತು ಚಾರ್ಜರ್‌ಗಳ ಬೆಲೆ ಇಳಿಕೆ
ಚಿನ್ನ, ಕತ್ತರಿಸಿದ ವಜ್ರಾಭರಣಗಳ ಮೇಲಿನ ಆಮದು ಸುಂಕ ಇಳಿಕೆ
ಎಲೆಕ್ಟ್ರಾನಿಕ್ಸ್ ಉಪಕರಣಗಳು ಇಳಿಕೆ
ಚಪ್ಪಲಿ ಹಾಗೂ ಚರ್ಮದ ಉತ್ಪನ್ನಗಳು ಇಳಿಕೆ
ಬಟ್ಟೆ ಇಳಿಕೆ
ಕೃಷಿ ಪರಿಕರಗಳು ಇಳಿಕೆ