February 2, 2026

ಮಂಡೆಕೋಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕಾನೂನು ಅರಿವು ಕಾರ್ಯಕ್ರಮ

0
IMG-20211026-WA0011.jpg

ಸುಳ್ಯ: ತಾಲೂಕು ಕಾನೂನು ಸೇವೆಗಳ ಸಮಿತಿ ಸುಳ್ಯ, ವಕೀಲರ ಸಂಘ ಸುಳ್ಯ, ಪೊಲೀಸ್ ಇಲಾಖೆ ಸುಳ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ, ಮಂಡೆಕೋಲು ಗ್ರಾಮ ಪಂಚಾಯತ್, ಸುದ್ದಿ ಸಮೂಹ ಮಾಧ್ಯಮ ಸುಳ್ಯ ಇದರ ಸಹಭಾಗಿತ್ವದಲ್ಲಿ 75ನೇ ವರ್ಷದ ಸ್ವಾತಂತ್ರ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಇಂದು ಮಂಡೆಕೋಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ ಎ ದೀಪ ಬೆಳಗಿಸಿ ಉದ್ಘಾಟಿಸಿ, ಒಂದು ನಡೆದ ನೈಜ ಘಟನೆಯ ಸಹಿತ ಮೋಟಾರು ವಾಹನ ಕಾಯ್ದೆ ಹಾಗೂ ವಿಮೆ ಯಾಕೆ ಅವಶ್ಯಕವೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ವಕೀಲರ ಸಂಘದ ಅಧ್ಯಕ್ಷ ಎಮ್. ವೆಂಕಪ್ಪ ಗೌಡ ವಹಿಸಿ ಸಂಧರ್ಭಯೋಚಿತವಾಗಿ ಅಧ್ಯಕ್ಷೀಯ ಭಾಷಣ ಮಾಡಿದರು. ಸ್ಥಳೀಯ ಪಂಚಾಯತ್ ಅಧ್ಯಕ್ಷೆ ವಿನುತ ಪಾತಿಕಲ್ಲು, ಉಪಾಧ್ಯಕ್ಷ ಅನಿಲ್ ಕುಮಾರ್ ತೋಟ ಪಾಡಿ, ಗೌರವ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಕೀಲ ಶ್ರೀಹರಿ ಕುಕ್ಕುಡೆಲು ರವರು ವಾಹನಗಳನ್ನು ಹೇಗೆ ಚಲಾಯಿಸಬೇಕು ಹಾಗೂ ವಾಹನ ಸವಾರರಿಗೆ ವಿಮೆ ಎಷ್ಟು ಅತ್ಯಗತ್ಯ, ಅದನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜನರಿಗೆ ಮೋಟಾರು ವಾಹನ ಕಾಯ್ದೆ ಹಾಗೂ ವಿಮೆಯನ್ನು ಸವಿವಾರವಾಗಿ ವಿವರಿಸಿದರು.

ಸುಳ್ಯ ನ್ಯಾಯಾಲಯದ ಎ ಪಿ ಪಿ ಜನಾರ್ಧನ್ ಬಿ, ವಕೀಲರು ಗಳಾದ ಚಂದ್ರಶೇಖರ್, ವಿಪುಲ್, ಎಂ ಎಂ ಬೊಳ್ಳಪ್ಪ, ನಾರಾಯಣ ಜಟ್ಟಿಪಳ್ಳ,ಮೊದಲಾದವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಸಿಬ್ಬಂದಿ ಮೋಹಿತ್ ಕಾರ್ಯಕ್ರಮ ನಿರೂಪಿಸಿ, ಗ್ರಾ ಪಂ ಪಿ.ಡಿ.ಓ ರಮೇಶ್ ಸ್ವಾಗತಿಸಿ, ಗ್ರಾ. ಪಂ ಸದಸ್ಯ ಬಾಲಚಂದ್ರ ದೇವರಗೊಂಡ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!