March 24, 2026

ಉಪ್ಪಿನಂಗಡಿ: ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಇಬ್ಬರು ಗಂಭೀರ

0
IMG_20220201_151535.jpg

ಉಪ್ಪಿನಂಗಡಿ: ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮತ್ತು ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಫೆ.1 ರಂದು ಬೆಳ್ತಂಗಡಿ- ಉಪ್ಪಿನಂಗಡಿ ರಸ್ತೆಯ ಪೆದಮಾಲೆ ಎಂಬಲ್ಲಿ ನಡೆದಿದೆ.

ಗಾಯಾಳುಗಳನ್ನು ಟೈಲ್ಸ್ ಕೆಲಸ ನಿರ್ವಹಿಸುವ ಕಾಲು ಸಿಂಗ್ ಮತ್ತು ಮೋಹನ್ ಸಿಂಗ್ ಎನ್ನಲಾಗಿದೆ.

ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಪಲ್ಸರ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮತ್ತು ಸಹ ಸವಾರ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!