March 20, 2026

ಕ್ರಿಶ್ಚಿಯನ್ನರ ಮೇಲೆ ಅತಿಹೆಚ್ಚು ಹಲ್ಲೆಗಳಾಗುತ್ತಿರುವ ರಾಜ್ಯಗಳ ಪೈಕಿ ಉತ್ತರ ಪ್ರದೇಶಕ್ಕೆ ಮೊದಲ ಸ್ಥಾನ: ವರದಿಯಿಂದ ಬಹಿರಂಗ

0
Screenshot_2022-01-31-11-29-18-60_680d03679600f7af0b4c700c6b270fe7.jpg

ಉತ್ತರಪ್ರದೇಶ: 2011ರ ಜನಗಣತಿಯ ಪ್ರಕಾರ ಭಾರತದ ಎಲ್ಲಾ ರಾಜ್ಯಗಳ ಪೈಕಿ ಉತ್ತರ ಪ್ರದೇಶವು ಅತಿ ಕಡಿಮೆ ಪ್ರಮಾಣದಲ್ಲಿ ಕ್ರಿಶ್ಚಿಯನ್ನರನ್ನು ಹೊಂದಿರುವ ಎರಡನೇ ರಾಜ್ಯವಾಗಿದೆ. ಆದರೆ ಕ್ರಿಶ್ಚಿಯನ್ನರ ಮೇಲೆ ಅತಿಹೆಚ್ಚು ಹಲ್ಲೆಗಳಾಗುತ್ತಿರುವ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮುಂಚೂಣಿಯಲ್ಲಿದೆ.

65,000ಕ್ಕೂ ಹೆಚ್ಚು ಚರ್ಚ್‌ಗಳ ರಾಷ್ಟ್ರೀಯ ಒಕ್ಕೂಟವಾಗಿರುವ ಇವಾಂಜೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಉತ್ತರ ಪ್ರದೇಶದಲ್ಲಿ 2018 ಮತ್ತು 2019ರಲ್ಲಿ ಕ್ರಿಶ್ಚಿಯನ್ನರ ವಿರುದ್ಧ ಅತಿ ಹೆಚ್ಚು ಹಿಂಸಾಚಾರದ ಪ್ರಕರಣಗಳು ದಾಖಲಾಗಿವೆ ಎಂದು ‘ನ್ಯೂಸ್‌ಲಾಂಡ್ರಿ’ ವರದಿ ಮಾಡಿದೆ.

ಮಾನವ ಹಕ್ಕುಗಳ ಸಂಸ್ಥೆಯಾದ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ (ಯುಸಿಎಫ್‌), ಕ್ರಿಶ್ಚಿಯನ್ನರ ವಿರುದ್ಧದ ಹಿಂಸಾಚಾರದ ಅಂಕಿಅಂಶಗಳನ್ನು ಸಂಗ್ರಹಿಸುತ್ತಿದೆ. 2021ರಲ್ಲಿ ಭಾರತದಾದ್ಯಂತ 500ಕ್ಕೂ ಹೆಚ್ಚು ಪ್ರಕರಣಗಳು ನಡೆದಿರುವುದನ್ನು ಈ ಸಂಸ್ಥೆ ದಾಖಲಿಸಿದೆ. ಇವುಗಳಲ್ಲಿ 102 ಪ್ರಕರಣಗಳು ಉತ್ತರ ಪ್ರದೇಶ ಒಂದರಲ್ಲೇ ವರದಿಯಾಗಿವೆ.

“2021ರಲ್ಲಿ ಉತ್ತರ ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ” ಎಂದು ಇಎಫ್‌ಐನ ರೆವರೆಂಡ್ ವಿಜಯೇಶ್ ಲಾಲ್ ಹೇಳಿದ್ದಾರೆ. ಸಾಮಾನ್ಯವಾಗಿ, ಭಾರತದಲ್ಲಿ ಕ್ರಿಶ್ಚಿಯನ್ನರ ವಿರುದ್ಧದ ಒಟ್ಟು ಹಿಂಸಾಚಾರದ ಪ್ರಕರಣಗಳ ಸಂಖ್ಯೆ 100 ಮತ್ತು 200ರ ನಡುವೆ ಸುಳಿದಾಡುತ್ತದೆ ಎನ್ನುವ ಅವರು, “2021ರಲ್ಲಿ, ಈ ಅಂಕಿ ಅಂಶವು ಎರಡು ಪಟ್ಟು ಹೆಚ್ಚಾಗಿದೆ. ಯುಪಿ, ಉತ್ತರಾಖಂಡ ಮತ್ತು ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗಳು ಇರುವುದರಿಂದ ಈ ವರ್ಷ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!