March 20, 2026

ರಿಯಾಲಿಟಿ ಶೋ ‘ಬಿಗ್ ಬಾಸ್-15’ರ ವಿಜೇತರಾಗಿ ಹೊರಹೊಮ್ಮಿದ ಕಿರುತೆರೆ ನಟಿ

0
Screenshot_2022-01-31-11-02-16-90_ae93b0d4e668ae3b9e42de29105ee7f0.jpg

ಮುಂಬೈ: ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಅವರು ಹಿಂದಿಯ ರಿಯಾಲಿಟಿ ಶೋ ‘ಬಿಗ್ ಬಾಸ್-15’ರ ವಿಜೇತರಾಗಿ ಹೊರಹೊಮ್ಮಿದ್ದಾರೆ.

ನಟ ಹಾಗೂ ಮಾಡೆಲ್ ಪ್ರತೀಕ್ ಸೆಹಜ್‌ಪಾಲ್ ಅವರನ್ನು ಪರಾಭವಗೊಳಸಿದ ತೇಜಸ್ವಿ ಪ್ರಕಾಶ್‌ ಬಿಗ್‌ ಬಾಸ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಾರ್ಯಕ್ರಮದ ನಿರೂಪಕರಾದ ಸಲ್ಮಾನ್ ಖಾನ್ ಅವರು ₹ 40 ಲಕ್ಷ ನಗದು ಬಹುಮಾನ ಹಾಗೂ ಬಿಗ್ ಬಾಸ್ ಟ್ರೋಫಿಯನ್ನು ತೇಜಸ್ವಿಗೆ ನೀಡಿದರು.

ಬಿಗ್‌ ಬಾಸ್‌ನಲ್ಲಿ ಜಯಸಾಧಿಸಿರುವ ಕುರಿತು ಫೋಟೊ ಸಮೇತ ಟ್ವೀಟ್‌ ಮಾಡಿರುವ ತೇಜಸ್ವಿ ಪ್ರಕಾಶ್‌, ‘ನಾಲ್ಕು ತಿಂಗಳ ಅತ್ಯಂತ ಸವಾಲಿನ ಪ್ರಯಾಣದ ಬಳಿಕ ಕನಸು ನನಸಾಗಿದೆ. ಈ ಕನಸನ್ನು ನನಸು ಮಾಡಿದ ಎಲ್ಲರಿಗೂ ಧನ್ಯವಾದಗಳು. ಟ್ರೋಫಿ ಮನೆಗೆ ಬಂದಿದೆ’ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!