June 10, 2026

ಉಳ್ಳಾಲ: ರುದ್ರಪಾದೆಯಿಂದ ಜಾರಿ ಬಿದ್ದು ನೀರು ಪಾಲಾಗುತ್ತಿದ್ದ ಮಗು ಮತ್ತು ಯುವಕನನ್ನು ರಕ್ಷಿಸಿದ ಯುವಕರು

0
images-22.jpeg

ಉಳ್ಳಾಲ: ಸೋಮೇಶ್ವರ ಸಮುದ್ರ ತೀರದಲ್ಲಿ ತಾಯಿಯೊಂದಿಗೆ ಆಟವಾಡುತ್ತಿದ್ದ ಮುಸ್ಲಿಂ ಕುಟುಂಬದ ಮಗು ಮತ್ತು ರುದ್ರಪಾದೆಯಿಂದ ಜಾರಿ ಬಿದ್ದು ನೀರು ಪಾಲಾಗುತ್ತಿದ್ದ ಯುವಕನನ್ನ ಜೀವರಕ್ಷಕರು ರಕ್ಷಣೆ ಮಾಡಿದ ಘಟನೆ ಇಂದು ಸಂಜೆ ನಡೆದಿದೆ.

ಸೋಮೇಶ್ವರ ಸಮುದ್ರ ತೀರದಲ್ಲಿ ತಾಯಿಯೊಂದಿಗೆ ನೀರಾಟವಾಡುತ್ತಿದ್ದ ಎರಡೂವರೆ ವರ್ಷದ ಹೆಣ್ಮಗುವೊಂದು ನೀರು ಪಾಲಾಗಿದ್ದು ಈ ವೇಳೆ ಸ್ಥಳದಲ್ಲಿದ್ದ ಕರಾವಳಿ ಕಾವಲು ಪಡೆಯ ಜೀವ ರಕ್ಷಕ ಸಿಬ್ಬಂದಿಗಳಾದ ಕಿರಣ್ ಆಂಟನಿ, ಅಶೋಕ್ ಸೋಮೇಶ್ವರ ಅವರು ಕಡಲ ಅಲೆಗಳೊಂದಿಗೆ ಸೆಣಸಿ ಎಳೆಯ ಮಗುವನ್ನ ರಕ್ಷಿಸಿದ್ದಾರೆ.

ಇದೇ ವೇಳೆ ಸೋಮೇಶ್ವರ ಕಡಲ ತೀರದ ರುದ್ರಪಾದೆಯ ಮೇಲೆ ಓಡುತ್ತಿದ್ದ ಬೋಳಿಯಾರ್ ನಿವಾಸಿ ಶರೀಫ್ (22) ಎಂಬ ಯುವಕ ಜಾರಿ ಕಡಲು ಪಾಲಾಗಿದ್ದು, ಆತನನ್ನೂ ಕಿರಣ್ ಆಂಟನಿ, ಅಶೋಕ್ ಸೋಮೇಶ್ವರ ಮತ್ತು ಸ್ಥಳೀಯರಾದ ಸುನಿಲ್ ಎಂಬವರು ರಕ್ಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!