February 2, 2026

ಮಂಗಳೂರು: ನರ್ಸ್‌ ಕೆಲಸ ಮಾಡುತ್ತಿದ್ದ ಯುವತಿ ನಾಪತ್ತೆ

0
IMG_20220129_153109.jpg

ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳು ನಾಪತ್ತೆಯಾದ ಘಟನೆ ನಡೆದಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಸನ್ನ ಡಿಕೋಸ್ತ (24) ನಾಪತ್ತೆಯಾದ ಯುವತಿ.
ಬೆಳಗ್ಗೆ ಹಾಸ್ಟೆಲ್ ನಿಂದ ಆಸ್ಪತ್ರೆಗೆ ಕೆಲಸಕ್ಕೆ ಹೋಗಿ ಸಂಜೆ ಹಾಸ್ಟಲ್ ಗೆ ಬಂದು ಅಲ್ಲಿನ ರಿಜಿಸ್ಟರ್ ಬುಕ್ ನಲ್ಲಿ ಸಂಜೆ ಸಮಯ 4.15 ಗಂಟೆಗೆ ನಾನು ಮನೆಗೆ ಹೋಗುತ್ತೇನೆಂದು ನಮೂದಿಸಿ ಮನೆಗೂ ಬಾರದೆ, ಹಾಸ್ಟೆಲ್ ಗೂ ಮರಳಿ ಹೋಗದೆ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ.

ನಾಪತ್ತೆಯಾದವರ ಚಹರೆ
ಸುಸನ್ನ ಡಿಕೋಸ್ತ 5.2 ಅಡಿ ಎತ್ತರವಿದ್ದು, ಕನ್ನಡ, ಕೊಂಕಣಿ, ಹಿಂದಿ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಗೋಧಿ ಮೈಬಣ್ಣ, ಉದ್ದ ಮುಖ, ಸಪೂರ ಶರೀರ ಹೊಂದಿದ್ದು ಕಪ್ಪು ಜೀನ್ಸ್ ಪ್ಯಾಂಟ್, ಕೆಂಪು ಬಣ್ಣದ ಟೀ ಶರ್ಟ್ ಧರಿಸಿದ್ದರು. ಈಕೆಯ ಬಗ್ಗೆ ಮಾಹಿತಿ ದೊರೆತವರು ಬರ್ಕೆ ಠಾಣೆಗೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!