ಬಂಟ್ವಾಳ: ‘ಅಂಗಡಿ ಯಾಕೆ ತಡವಾಗಿ ತೆರೆಯುತ್ತೀಯಾ?’ ಎಂದು ಪ್ರಶ್ನಿಸಿ ಚೂರಿ ಇರಿತ
ಬಂಟ್ವಾಳ: ಅಂಗಡಿ ತೆರೆಯುತ್ತಿದ್ದ ವೇಳೆ ಅಂಗಡಿ ಮಾಲಕನು ಏಕಾಎಕಿ ಬಂದು ‘ಯಾಕೆ ಅಂಗಡಿಯನ್ನು ತಡವಾಗಿ ತೆರೆಯುತ್ತೀಯಾ’ ಎಂದು ಹೇಳಿ ಹರಿತವಾದ ಆಯುಧದಿಂದ ಇರಿದು ಜೀವಬೆದರಿಕೆ ಹಾಕಿದ ಘಟನೆ ಬಂಟ್ವಾಳದ ಮೆಲ್ಕಾರ್‌ನಲ್ಲಿ ನಿನ್ನೆ ನಡೆದಿದೆ.
ಗಾಯಗೊಂಡವರನ್ನು ಸದಕತುಲ್ಲಾ(35) ಎಂದು ಗುರುತಿಸಲಾಗಿದೆ.
ಘಟನೆ ವಿವರ
ಸದಕತುಲ್ಲಾ ಮೆಲ್ಕಾರ್ ಎಂಬಲ್ಲಿ ಕಮರ್ಷಿಯಲ್ಲ್ ಕಾಂಪ್ಲೆಕ್ಸ್ ನಲ್ಲಿರುವ ಬಟ್ಟೆ ಅಂಗಡಿಯನ್ನು 7 ವರ್ಷಗಳ ಹಿಂದೆ ತಿಂಗಳ ಬಾಡಿಗೆಗಾಗಿ ನಿಸಾರ ಅಹಮ್ಮದ್ ರವರಿಂದ ಪಡೆದಿದ್ದರು.
ಆದರೆ ನಿನ್ನೆ ಏಕಾಏಕಿ ಗಾರ್ಮೆಂಟ್ಸ್ ಅಂಗಡಿ ತೆರೆಯುತ್ತಿರುವ ಸಂದರ್ಭ ನಿಸಾರ ಅಹಮ್ಮದ ಏಕಾಏಕಿ ಅಂಗಡಿಯ ಹತ್ತಿರ ಬಂದು ಯಾಕೆ ಅಂಗಡಿಯನ್ನು ತಡವಾಗಿ ತೆರೆಯುತ್ತೀಯಾ ಎಂದು ಪ್ರಶ್ನಿಸಿದ್ದಾರೆ.
ನಂತರ ಆತನ ಅಡುಗೆ ಕೋಣೆಯಲ್ಲಿದ್ದ ಹರಿತವಾದ ಆಯುಧದಿಂದ ಸದಕತುಲ್ಲಾ ಎಡಕಣ್ಣಿನ ಕೆಳಭಾಗ, ಮೂಗಿನ ಬಲಭಾಗ, ಎಡಕಿವಿಯ ಮೇಲ್ಭಾಗ, ಬಲಕಣ್ಣಿನ ಬಲಬದಿ, ಬಲಗಲ್ಲ, ಎಡ ಕುತ್ತಿಗೆ ಮತ್ತು ಕುತ್ತಿಗೆಯ ಹಿಂಭಾಗ, ಎದೆಯ ಭಾಗಕ್ಕೆ ಗೀರಿದ್ದಾರೆ.
ಆಮೇಲೆ ನಿನ್ನನ್ನು ನೋಡಿಕೊಳ್ಳುತ್ತೇನೆ, ನಿನ್ನನ್ನು ಕೊಲ್ಲುತ್ತೇನೆ, ನಿನ್ನನ್ನು ಶೂಟ್ ಮಾಡುತ್ತೇನೆ ಎಂದು ಬೆದರಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




