ಎಸ್ ಡಿ ಪಿ ಐ ರಾಜ್ಯಾಧ್ಯಕ್ಷರಿಗೆ ಕಲ್ಲುಗುಂಡಿಯಲ್ಲಿ ಸ್ವಾಗತ
ಸಂಪಾಜೆ: ಜನವರಿ 23 ರಂದು ಬೆಂಗಳೂರಿನಿಂದ ಮಂಗಳೂರು ಪ್ರಯಾಣದಲ್ಲಿದ್ದ ಎಸ್ ಡಿ ಪಿ ಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ರವರನ್ನು ಕಲ್ಲುಗುಂಡಿಯ ಕೂಲಿಷೆಡ್ ಬಳಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಸಾರ್ವಜನಿಕರು ಸೇರಿ ಸ್ವಾಗತಿಸಿದರು.

ರಾಜ್ಯಾಧ್ಯಕ್ಷರಿಗೆ ರಿವೈಸ್, ರಿಯಾಝ್ ಎಸ್ ಎಂ, ವಾಹಿದ್ ರವರು ಹೂಗುಚ್ಛ ನೀಡಿ, ಎಸ್ ಡಿ ಪಿ ಐ ಸಂಪಾಜೆ ಗ್ರಾಮ ಸಮಿತಿ ಕಾರ್ಯದರ್ಶಿ ಶರೀಫ್ ಸೆಟ್ಟಿಯಡ್ಕ ಶಾಲು ಹೊದಿಸಿ, ಸ್ವಾಗತಿಸಿದರು.
ಈ ಸಂದರ್ಭದಲ್ಲಿ SDPI ಸಂಪಾಜೆ ಗ್ರಾಮ ಸಮಿತಿಯ ಉಪಾಧ್ಯಕ್ಷರಾದ ಉದೈಫ ಧಂಡಕಜೆ, ಜೊತೆ ಕಾರ್ಯದರ್ಶಿ ಶಾಜಿದ್ ಐ ಜಿ, ಕೋಶಾಧಿಕಾರಿ ಸಲೀಮ್ ಧರ್ಕಾಸ್, ಹಾಗೂ ಹಲವಾರು ಸಾರ್ವಜನಿಕರು ಉಪಸ್ಥಿತರಿದ್ದರು.




