ವಿಟ್ಲ: ಪ.ಪಂ ಸಿಬ್ಬಂದಿ ಆತ್ಮಹತ್ಯೆ ಯತ್ನ ಪ್ರಕರಣ: ಶ್ರೀಕೃಷ್ಣ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು
ವಿಟ್ಲ: ಕರ್ತವ್ಯದಲ್ಲಿದ್ದ ನನಗೆ ಮಾಜಿ ಪಟ್ಟಣ ಪಂಚಾಯತ್ ಸದಸ್ಯರೋರ್ವರು ಜಾತಿ ನಿಂದನೆ ಮಾಡಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಯುವಕ ರೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಚಂದಳಿಕೆ ಜನತಾ ಕಾಲೋನಿ ನಿವಾಸಿ ವೆಂಕಪ್ಪ ನಾಯ್ಕ್ ರವರ ಪುತ್ರ ರಾಜೇಶ್ ದೂರುದಾರರಾಗಿದ್ದಾರೆ. ಮಾಜಿ ಪಟ್ಟಣ ಪಂಚಾಯತ್ ಸದಸ್ಯ ಶ್ರೀಕೃಷ್ಣ ರವರು ಪ್ರಕರಣದ ಆರೋಪಿಯಾಗಿದ್ದಾರೆ.
ನಾನು ವಿಟ್ಲ ಪಟ್ಟಣ ಪಂಚಾಯತ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ವಾಲ್‌ಮ್ಯಾನ ಆಗಿ ಕೆಲಸ ಮಾಡಿಕೊಂಡಿದ್ದು. ಪರಿಶಿಷ್ಠ ಪಂಗಡಕ್ಕೆ ಸೇರಿದವರಾಗಿರುತ್ತೇನೆ. ಪಟ್ಟಣ ಪಂಚಾಯತ್‌ನ ಮಾಜಿ ಸದಸ್ಯರಾದ ಶ್ರೀಕೃಷ್ಣ ಎಂಬವರು ಸುಮಾರು 2 ವರ್ಷಗಳಿಂದ ಸಾರ್ವಜನಿಕರಿಗೆ ಸಂಬಂದಪಟ್ಟ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದರು ಜ.೧೮ರಂದು ನಾನು ಪಟ್ಟಣ ಪಂಚಾಯತ್ ನಲ್ಲಿ ಕರ್ತವ್ಯದಲ್ಲಿರುವ ಸಮಯ ಅಲ್ಲಿಗೆ ಬಂದ ಶ್ರೀಕೃಷ್ಣರವರು ನನಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ ನಿನ್ನನ್ನು ಕೆಲಸದಿಂದ ತೆಗೆಸುತ್ತೇನೆ ಎಂದೆಲ್ಲ ಹೇಳಿ ಬೆದರಿಸಿರುತ್ತಾರೆ ಶ್ರೀಕೃಷ್ಣರವರು ಸಾರ್ವಜನಿಕರ ರಾಜೀವ ಗಾಂದಿ ವಸತಿ ನಿಗಮ ಸಂಬಂದಿಸಿದ ಹಣ ಬಿಡುಗಡೆಯಾಗದೆ ಬ್ಯಾಂಕಿಗೆ ಜಮಾ ಆಗದ ಕಾರಣ ಈ ಕೃತ್ಯ ನಡೆಸಿದ್ದಾರೆ ಎಂದು ರಾಜೇಶ್ ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





