ಸುಳ್ಯ: ಸೋಣಂಗೇರಿ ಬಳಿ ಟಿಪ್ಪರ್-ಬೈಕ್ ಅಪಘಾತ: ಯುವಕನಿಗೆ ಗಾಯ
ಸುಳ್ಯ: ತಾಲೂಕು ಸೋಣಂಗೇರಿ ಸಮೀಪದ ಸುತ್ತುಕೋಟೆ ಬಳಿ ಜ.17 ರಂದು ಸಂಭವಿಸಿದ ಟಿಪ್ಪರ್- ಬೈಕ್ ಅಪಘಾತದಲ್ಲಿ ಬೈಕ್ ಸವಾರ ಜಖಂಗೊಂಡ ಘಟನೆ ನಡೆದಿದೆ.

ದುಗ್ಗಲಡ್ಕದ ಕಾರ್ ಬಾಡಿ ಶಾಪ್ ನ ಮಾಲಕ ಯತೀನ್ ದುಗ್ಗಲಡ್ಕದಿಂದ ಸುಳ್ಯದ ಕಡೆಗೆ ಬರುತ್ತಿದ್ದು, ಸುಳ್ಯ ಕಡೆಯಿಂದ ಹೋಗುತ್ತಿದ್ದ ಟಿಪ್ಪರ್ ಗೆ ಸೋಣಂಗೇರಿ ಸಮೀಪದ ಸುತ್ತುಕೋಟೆ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಯಿತು.
ಪರಿಣಾಮವಾಗಿ ಯತೀನ್ ರವರ ಎಡ ಕೈ ಜಖಂಗೊಂಡು, ತಲೆ, ಮುಖದ ಭಾಗಕ್ಕೆ ಅಲ್ಪಸ್ವಲ್ಪ ಗಾಯವಾಗಿರುವುದಾಗಿ ತಿಳಿದುಬಂದಿದೆ. ಬೈಕ್ ಕೂಡ ಜಖಂಗೊಂಡಿದೆ. ಟಿಪ್ಪರ್ ರಾಂಗ್ ಸೈಡ್ ಬಂದದ್ದೆ ಅಪಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಗಾಯಾಳುವನ್ನು ಕೆ.ವಿ.ಜಿ.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.




