November 25, 2024

ಚಿಕಿತ್ಸೆಗೆ ಬಂದಿದ್ದ 16 ವರ್ಷದ ಬಾಲಕಿಯ ಮೇಲೆ ವೈದ್ಯನಿಂದಲೇ ಅತ್ಯಾಚಾರ

0

ಮುಂಬೈ: ಚಿಕಿತ್ಸೆಗೆ ಬಂದಿದ್ದ 16 ವರ್ಷದ ಬಾಲಕಿಯ ಮೇಲೆ ವೈದ್ಯನೋರ್ವ ಅತ್ಯಾಚಾರ ಮಾಡಿರುವ ಘಟನೆ ಮುಂಬೈಯಲ್ಲಿ ನಡೆದಿದೆ.

ಬಾಲಕಿಯು ಮಾತಿನ ದುರ್ಬಲತೆ ಹಾಗೂ ಕೆಲ ದೈಹಿಕ ಅಂಗವೈಕಲ್ಯದ ಸಮಸ್ಯೆಯಿಂದ ಬಳಲುತ್ತಿದ್ದಳು. ಹೀಗಾಗಿ ಮುಂಬೈನ ಕ್ಲಿನಿಕ್ ವೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. 40 ವರ್ಷದ ವೈದ್ಯ ಈಕೆಗೆ ಚಿಕಿತ್ಸೆ ನೀಡುತ್ತಿದ್ದ. ಈಕೆಯ ಸರಿಯಾಗಿ ಮಾತನಾಡಲು ಬಾರದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಆದರೆ ಕ್ಲಿನಿಕ್ ಗೆ ಬಂದಾಗಲೆಲ್ಲ ಆತನ ದುರ್ವತನೆ ಮಿತಿಮೀರಿತ್ತು. ಮೊನ್ನೆ ಕೂಡ ಚಿಕಿತ್ಸೆಗೆ ಬಂದಾಗ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಬಳಿಕ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.

ಫಿಸಿಯೋ ಥೆರಪಿಸ್ಟ್ ಆಗಿದ್ದ ವೈದ್ಯ ಈಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ. ಆದರೆ ಈಕೆ ಯಾರ ಬಳಿಯೂ ಹೇಳಿಕೊಂಡಿಲ್ಲ. ನಿನಗೆ ಇರುವ ಸಮಸ್ಯೆಯನ್ನು ನಾನು ಬಗೆಹರಿಸುತ್ತೆನೆ. ಎಲ್ಲರಂತೆ ಎದ್ದು ಓಡಾಡಲು, ನಮ್ಮಂತೆ ಮಾತನಾಡಲು ಮಾಡುತ್ತೇನೆ ಎಂದು ವಿಶೇಷಚೇತನ ಬಾಲಕಿಗೆ ವೈದ್ಯ ಭರವಸೆ ನೀಡಿದ್ದ. ಮೊದಲೇ ಸಮಸ್ಯೆಗಳಿಂದ ಬಳಲುತ್ತಿದ್ದ ಆಕೆಯೂ ಕೂಡ ಸುಮ್ಮನಾಗಿದ್ದಳು. ಪ್ರತಿ ಬಾರಿ ಚಿಕಿತ್ಸೆಗೆಂದು ಕ್ಲಿನಿಕ್ ಗೆ ಬಂದಾಗೆಲ್ಲ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದರಿಂದ ರೋಸಿಹೋಗಿದ್ದ ಬಾಲಕಿ, ಈ ಬಗ್ಗೆ ತನ್ನ ಪೋಷಕರಿಗ ಮೆಸೇಜ್ ಮಾಡಿ ಮಾಹಿತಿ ನೀಡಿದ್ದಾಳೆ.

ಇನ್ನೂ ಮಗಳನ್ನು ಇದೇ ಕ್ಲಿನಿಕ್​​ಗೆ ಕರೆದುಕೊಂಡು ಬರುತ್ತಿದ್ದ ಪೋಷಕರು, ಆಕೆಯನ್ನು ಒಳಗೆ ಕಳುಹಿಸಿ, ತಾವು ಹೊರಗೆ ಕೂರುತ್ತಿದ್ದರು. ಈ ಘಟನೆಯ ಬಗ್ಗೆ ಅವರಿಗೆ ಕಿಂಚಿತ್ತು ತಿಳಿದಿಲ್ಲ. ಒಂದು ವರ್ಷದಿಂದ ಇದೇ ವೈದ್ಯನ ಬಳಿ ಮಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ಮೊನ್ನೆ ಅತ್ಯಾಚಾರದ ಬಳಿಕ ಕೂಡಲೇ ಹೊರಗಡೆ ಇದ್ದ ಪೋಷಕರಿಗೆ ಬಾಲಕಿ ಮೆಸೇಜ್​ ಮಾಡಿದ್ದಳು. ಒಳಗೆ ಬಂದು ನೋಡಿದಾಗ ಪೋಷಕರಿಗೆ ಈ ವಿಚಾರ ತಿಳಿದಿದ್ದು, ಪೊಲೀಸರನ್ನು ಕರೆಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!