ಅ.28ಕ್ಕೆ ವಕಾ೯ಡಿಯಲ್ಲಿ ಕ್ಯಾನ್ಸರ್ ರೋಗ ನಿಣ೯ಯ ಕ್ಯಾಂಪ್, ಮಾಹಿತಿ ಶಿಬಿರ
ಮಂಜೇಶ್ವರ: ಇಲ್ಲಿನ ವಕಾ೯ಡಿ ಧಮ೯ನಗರದ ಕುಟುಂಬ ಆರೋಗ್ಯ ಕೇಂದ್ರದಲ್ಲಿ ವಕಾ೯ಡಿ ಪಂಚಾಯತ್ ಹಾಗೂ
ವಕಾ೯ಡಿ ಸಿಎಚ್ ಸಿ, ಮಲಬಾರ್ ಕ್ಯಾನ್ಸರ್ ಸೆಂಟರ್ ವತಿಯಿಂದ ವಕಾ೯ಡಿಯಲ್ಲಿ ಕ್ಯಾನ್ಸರ್ ರೋಗ ನಿಣ೯ಯ ಕ್ಯಾoಪ್ ಹಾಗೂ ಮಾಹಿತಿ ಶಿಬಿರ ಅಕ್ಟೋಬರ್ – 28 ರಂದು ಗುರುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಕಾಯ೯ಕ್ರಮದಲ್ಲಿ ಅಧ್ಯಕ್ಷತೆಯನ್ನು ವಕಾ೯ಡಿ ಪಂ ಆರೋಗ್ಯ ಸ್ಥಾಯಿ ಸಮಿತಿ ಚಯರ್ಮೇನ್ ಅಶಾಲತಾ ವಹಿಸಲಿದ್ದು, ಉದ್ಘಾಟನೆಯನ್ನು ವಕಾ೯ಡಿ ಗ್ರಾ ಪಂ ಅಧ್ಯಕ್ಷ ರಾದ ಭಾರತಿ ಎಸ್ ನಿವ೯ಹಿಸಲಿದ್ದಾರೆ.
ಕಾಯ೯ಕ್ರಮದಲ್ಲಿ ಪಂ ಸದಸ್ಯರಾದ ಇಬ್ರಾಹಿಂ, ವೈದ್ಯಾಧಿಕಾರಿ ಡಾ ಸೈನಾ, ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಧನ್ಯವಾದವನ್ನು ಶ್ರೀಮತಿ ಶರೀಫಾ ನಿವ೯ಹಿಸಲಿದ್ದು ಹೆಚ್ಚಿನ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದೂ ವಕಾ೯ಡಿ ಕುಟುಂಬ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ತಿಳಿಸಿದ್ದಾರೆ




