March 23, 2026

ಸಾಲೆತ್ತೂರು ಕೊರಗಜ್ಜನ ವೇಷ ಧರಿಸಿದ ವಿಚಾರ:
ಪಿ ಎಫ್ ಐ ವಿಟ್ಲ ವಲಯ ಖಂಡನೆ

0
image_editor_output_image2123538839-1641539280066

ವಿಟ್ಲ: ಠಾಣಾ ವ್ಯಾಪ್ತಿಯ ಸಾಲೆತ್ತೂರು ಎಂಬಲ್ಲಿ ಮದುಮಗ ಕೊರಗಜ್ಜನನ್ನು ಅವಹೇಳನವಾಗಿ ನಿಂದಿಸಿದ ಘಟನೆಯನ್ನು ಪಿ ಎಫ್ ಐ ಖಂಡಿಸಿದೆ.

ಇದು ಇಸ್ಲಾಮಿನ ಚೌಕಟ್ಟನ್ನು ಮೀರಿದ್ದು, ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಆಯಾ ಜಮಾತಿನ ಸಮಿತಿಗಳು ಮುನ್ನಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ. ಹಾಗೆಯೇ ಈ ಘಟನೆಗೆ ಸಂಬಂಧಿಸಿ ಸಂಘ ಪರಿವಾರದ ದುಷ್ಟ ಶಕ್ತಿಗಳು ಕೋಮುಭಾವನೆ ಕೆರಳಿಸುವ ಉದ್ದೇಶದಿಂದ ಮದುಮಗಳ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದನ್ನು, ಪಾಪ್ಯುಲರ್ ಫ್ರಂಟ್ ಒಫ್ ಇಂಡಿಯಾ ಖಂಡಿಸುತ್ತದೆ.

ಅದೇ ರೀತಿ ಸಂಘಪರಿವಾರವು ಇಂತಹ ಘಟನೆಗಳನ್ನು ಮರುಕಳಿಸಲು ಪ್ರಯತ್ನಿಸಿದ್ದಲ್ಲಿ ತಕ್ಕುದಾದ ಪ್ರತಿಕ್ರಿಯೆ ನೀಡಲು ಪಾಪ್ಯುಲರ್ ಫ್ರಂಟ್ ಒಫ್ ಇಂಡಿಯಾ ಸದಸ್ಯರು ಸಿದ್ದರಿದ್ದು, ಈ ಘಟನೆಗೆ ಸಂಬಂಧಿಸಿದ ಪೊಲೀಸ್ ಇಲಾಖೆ ಕಾನೂನು ಕ್ರಮವನ್ನು ತೆಗೆದುಕೊಂಡು ಸಾಲೆತ್ತೂರಿನ ಶಾಂತಿಯನ್ನು ಕಾಪಾಡಿಕೊಳ್ಳಬೇಕೆಂದು ಪಿಎಫ್‌ಐ ವಿಟ್ಲ ಡಿವಿಜನ್ ಅಧ್ಯಕ್ಷ ಶಾಫಿ ಮಾಳಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!