March 23, 2026

ಸುಳ್ಯ: ಮಸಾಲೆ ಪದಾರ್ಥ ಡ್ರೈ ಮಾಡುವ ಯಂತ್ರಕ್ಕೆ ಮಹಿಳೆಯ ಕೈ ಸಿಲುಕಿ ಕೈಗೆ ಗಂಭೀರ ಗಾಯ

0
images.jpeg

ಸುಳ್ಯ: ಜಯನಗರ ಇಂಡಸ್ಟ್ರೀಸ್ ಒಂದರಲ್ಲಿ ಮಸಾಲೆ ಪುಡಿಗೆ ಬಳಸುವ ಪದಾರ್ಥಗಳ ಡ್ರೈ ಮಾಡುವ ಮಿಷನ್ ನಲ್ಲಿ ಮಹಿಳೆಯೋರ್ವರ ಕೈ ಸಿಲುಕಿ ಕೈಗೆ ಗಂಭೀರ ಗಾಯಗೊಂಡ ಘಟನೆ ಜನವರಿ 5ರಂದು ವರದಿಯಾಗಿದೆ.

ಜಯನಗರ ನಿವಾಸಿ ಸಾವಿತ್ರಿ ಎಂಬವರು ಗಾಯಗೊಂಡ ಮಹಿಳೆಯಾಗಿದ್ದಾರೆ. ಇವರು ಇಂಡಸ್ಟ್ರೀಸ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ನಿನ್ನೆ ಮಧ್ಯಾಹ್ನದ ಸಮಯ ಮಸಾಲೆ ಪದಾರ್ಥಕ್ಕೆ ಬಳಸುವ ಸಾಮಗ್ರಿಗಳ ಡ್ರೈ ಮಾಡುವ ಯಂತ್ರದಲ್ಲಿ ಕಾರ್ಯನಿರತವಾಗಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನೆ ನಡೆದ ಸಂದರ್ಭ ಸ್ಥಳದಲ್ಲಿದ್ದ ಸಹ ಸಿಬ್ಬಂದಿ ವರ್ಗದವರು ಅವರನ್ನು ರಕ್ಷಿಸಿ ಸುಳ್ಯ ಕೆವಿಜಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಅವರನ್ನು ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!