February 4, 2026

ದ.ಕ ಜಿಲ್ಲೆಯಲ್ಲಿ ಕೊರೋನಾ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸಿದ್ಧತೆ

0
images-1.jpeg

ಮಂಗಳೂರು: ದ.ಕ.ಜಿಲ್ಲಾಡಳಿತ ಕೋವಿಡ್ ನ ಮೂರನೇ ಅಲೆಯನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ ಎಂದು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ‌.ಸದಾಶಿವ ಶಾನುಭಾಗ್ ಹೇಳಿದರು.

ವೆನ್ಲಾಕ್ ಆಸ್ಪತ್ರೆಯಲ್ಲಿ 905 ಬೆಡ್ ಗಳ ವ್ಯವಸ್ಥೆಯಿದ್ದು, 480 ಬೆಡ್ ಗಳಿಗೆ ಸೆಂಟ್ರಲ್ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಲಾಗಿದೆ. ಈಗಾಗಲೇ 3 ಆಕ್ಸಿಜನ್ ಪ್ಲ್ಯಾಂಟ್ ಗಳು ಕಾರ್ಯಚರಣೆ ಮಾಡುತ್ತಿದ್ದು, 12 ಕೆಎಲ್ ಬಿ ಸಾಮಥ್ಯವುಳ್ಳ ಲಿಕ್ವಿಡ್ ಮೆಡಿಕಲ್‌ ಆಕ್ಸಿಜನ್ ಸ್ಟೋರೇಜ್ ಟ್ಯಾಂಕ್ ವ್ಯವಸ್ಥೆಯನ್ನು ಮಾಡಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗುವ ಸಾಧ್ಯತೆಯಿಲ್ಲ.

ಅದೇ ರೀತಿ 30-35 ಮೆಡಿಕಲ್ ಐಸಿಯು ಬೆಡ್ ಇದ್ದು, 30 ಬೆಡ್ ಗಳ ಮಕ್ಕಳ ಐಸಿಯುವನ್ನು ಸಜ್ಜುಗೊಳಿಸಲಾಗಿದೆ. ಅಲ್ಲದೆ 2 ಸುಸಜ್ಜಿತ ಐಸಿಯು, 20 ಬೆಡ್ ಗಳ ಸರ್ಜಿಕಲ್ ಮತ್ತು ಎಮರ್ಜೆನ್ಸಿ ಐಸಿಯು ವ್ಯವಸ್ಥೆಯಿದೆ. ಆದ್ದರಿಂದ ಯಾರೂ ಭೀತಿಗೊಳಗಾಗುವ ಅವಶ್ಯಕತೆಯಿಲ್ಲವೆಂದು ಡಾ.ಸದಾಶಿವ ಶಾನುಭಾಗ್ ಹೇಳಿದರು.

Leave a Reply

Your email address will not be published. Required fields are marked *

You may have missed

error: Content is protected !!